ರಾಜ್ಗಢ (ಮಧ್ಯಪ್ರದೇಶ): ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಭೀಕರ ರಸ್ತೆ ಅಪಘಾತ: ಐವರು ದುರ್ಮರಣ, ಐವರ ಸ್ಥಿತಿ ಗಂಭೀರ - Road accident in Rajgar of MP
ಮಧ್ಯಪ್ರದೇಶದ ರಾಜ್ಗಢ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಭೀಕರ ರಸ್ತೆ ಅಪಘಾತ: ಐವರು ದುರ್ಮರಣ, ಐವರ ಸ್ಥಿತಿ ಗಂಭೀರ Road accident in Rajgar](https://etvbharatimages.akamaized.net/etvbharat/prod-images/768-512-7717523-623-7717523-1592800604273.jpg)
ಮಧ್ಯಪ್ರದೇಶದ ರಾಜ್ಗರ್ನಲ್ಲಿ ಭೀಕರ ರಸ್ತೆ ಅಪಘಾತ
ಗುನಾದಿಂದ ಇಂದೋರ್ಗೆ ಹೋಗುತ್ತಿದ್ದ ವ್ಯಾಗನರ್ ಕಾರು ಮಹಾರಾಷ್ಟ್ರದಿಂದ ಲಖನೌ ಕಡೆಗೆ ಹೋಗುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವ್ಯಾಗನರ್ ಕಾರಿನಲ್ಲಿದ್ದ ಒಂದು ಮಗು ಹೊರತು ಪಡಿಸಿ ಉಳಿದೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನೋವಾ ಕಾರಿನಲ್ಲಿದ್ದವರು ಸಂತರು ಎಂದು ಹೇಳಲಾಗುತ್ತಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸಾರಂಗಪುರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.