ಕರ್ನಾಟಕ

karnataka

ETV Bharat / bharat

13 ಮತಗಳಿಂದ ಆರ್​ಜೆಡಿ ಅಭ್ಯರ್ಥಿ ಸೋಲು: ಸರ್ಕಾರದ ವಿರುದ್ಧ ಬೆಂಬಲಿಗರ ಪ್ರತಿಭಟನೆ - ಶಕ್ತಿ ಸಿಂಗ್ ಯಾದವ್​ಗೆ ಸೋಲು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಟ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ಯಾದವ್ ಉತ್ತಮ ಅಂತರದಿಂದ ಗೆದ್ದಿದ್ದರೂ ಸರ್ಕಾರ ಮತ್ತು ಆಡಳಿತವು ಮೋಸದಿಂದ ತಮ್ಮ ಸ್ಥಾನ ಕಳೆದುಕೊಳ್ಳುವಂತೆ ಮಾಡಿವೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RJD supporters create ruckus in Nalanda
13 ಮತಗಳಿಂದ ಆರ್​ಜೆಡಿ ಅಭ್ಯರ್ಥಿ ಸೋಲು

By

Published : Nov 11, 2020, 10:48 AM IST

ನಳಂದ (ಬಿಹಾರ):ರಾಷ್ಟ್ರೀಯ ಜನತಾದಳದ ಅಭ್ಯರ್ಥಿ, ಅಟ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ಯಾದವ್ ಅವರು ನಳಂದ ಜಿಲ್ಲೆಯ ಹಿಲ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 13 ಮತಗಳಿಂದ ಸೋಲು ಕಂಡಿದ್ದು, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಬೆಂಬಲಿಗರ ಪ್ರತಿಭಟನೆ

ಸರ್ಕಾರ ಮತ್ತು ಆಡಳಿತದಿಂದ ವಂಚನೆ ಆಗಿದೆ ಆರೋಪಿಸಿದ ಪ್ರತಿಭಟನೆ ಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಟ್ರಿ ಮುನಿ ಅವರು ಉತ್ತಮ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿದ್ದರು ಆದರೆ, ಅವರನ್ನು ಸೋಲುವಂತೆ ಮಾಡಲಾಯಿತು ಎಂದು ಬೆಂಬಲಿಗರು ಆರೋಪಿಸಿದ್ದಾರೆ.

ಸೋಗ್ರಾ ಕಾಲೇಜಿನಲ್ಲಿ ಮತ ಎಣಿಕೆಯ ನಂತರ ಆರ್‌ಜೆಡಿ ಅಭ್ಯರ್ಥಿಯ ಸೋಲು ಘೋಷಿಸಲಾಯಿತು. ಈ ವೇಳೆ ಆರ್‌ಜೆಡಿ ಬೆಂಬಲಿಗರು ಬೀದಿಗಿಳಿದು ಸರ್ಕಾರ ಮತ್ತು ಆಡಳಿತದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಕೇಂದ್ರ ಮೀಸಲು ಪೊಲೀಸ್ ಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದವು.

ABOUT THE AUTHOR

...view details