ಪಾಟ್ನಾ(ಬಿಹಾರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಕುರಿತು ಆರ್‌ಜೆಡಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುಶಾಂತ್ ರಜಪೂತ್ ಸಮುದಾಯಕ್ಕೆ ಸೇರಿದವರಲ್ಲ. ರಜಪೂತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಅರುಣ್ ಯಾದವ್ ವಿವಾದದ ಕಿಡಿ ಹಚ್ಚಿದ್ದಾರೆ.
ಸಹರ್ಸಾ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ್ದ ರಸ್ತೆ ಉದ್ಘಾಟಿಸಿ ಮಾತನಾಡಿರುವ ಶಾಸಕ ಯಾದವ್, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವಂತವನಲ್ಲ. ಈ ಬಗ್ಗೆ ನನಗೆ ನೋವಿದೆ. ಆತ ರಾಜಪೂತನಾಗಿದ್ದಾನೆ. ಹೋರಾಟ ಮಾಡುವಂತಹ ವ್ಯಕ್ತಿ. ಸಾಯುವ ಮುನ್ನ ರಜಪೂತರು ಬೇರೆಯವರನ್ನು ಕೊಂದೇ ನಂತರ ಸಾಯುತ್ತಾರೆ ಎಂದಿದ್ದಾರೆ.