ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆ ನಿಲ್ಲಿಸದಿದ್ದರೆ ಇಂಡಸ್‌ ನೀರು ಬಂದ್‌: ಪಾಕ್‌ಗೆ ಗಡ್ಕರಿ ಖಡಕ್ ಎಚ್ಚರಿಕೆ - Kannada news

ಪಾಕಿಸ್ತಾನ ಭಯೋತ್ಪಾದನೆಯನ್ನು ಹೀಗೆಯೇ ಮುಂದುವರಿಸಿದರೆ ನಾವು ಇಂಡಸ್​ ನದಿ ನೀರನ್ನು ತಡೆ ಹಿಡಿಯಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಪಾಕಿಸ್ತಾನಕ್ಕೆ ಕಟು ಸಂದೇಶ ರವಾನಿಸಿದ್ದಾರೆ.

ನಿತಿನ್​ ಗಡ್ಕರಿ

By

Published : May 9, 2019, 10:07 AM IST

ಅಮೃತ​ಸರ: ಪಾಕಿಸ್ತಾನ ಭಯೋತ್ಪಾದನೆಯನ್ನು ಹೀಗೆಯೇ ಮುಂದುವರಿಸಿದ್ದೇ ಆದಲ್ಲಿ ನಾವು ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಇಂಡಸ್​ ನದಿ ನೀರನ್ನು ತಡೆ ಹಿಡಿಯಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಮೃತ್​ಸರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಈಗಾಗಲೇ ಭಾರತ ಸರ್ಕಾರ ನದಿ ನೀರನ್ನು ತಡೆ ಹಿಡಿಯಲು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದ್ದಾರೆ.

ಇಂಡಸ್‌ ನದಿಗೆ ಭಾರತ ಸರ್ಕಾರವು ಈಗಾಗಲೇ ಆರು ಕಡೆಗಳಲ್ಲಿ ಡ್ಯಾಂ ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದು ಪಂಜಾಬ್​, ಹರಿಯಾಣ, ಉತ್ತರಖಂಡ್​, ಉತ್ತರ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ನಿರ್ಮಿಸಬೇಕೆಂದು ಯೋಜಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವ 1960ರಿಂದಲೂ ಇಂಡಸ್‌ ನದಿ ನೀರಿನ ವಿವಾದ ಇದೆ. ಆದ್ರೆ ಇಲ್ಲಿಯವರೆಗೆ ಈ ಸಮಸ್ಯೆ ಹೆಚ್ಚು ಮಹತ್ವ ಪಡೆದಿರಲಿಲ್ಲ. ಪಾಕಿಸ್ತಾನದ 'ಉಗ್ರ' ನೀತಿಯಿಂದಾಗಿ ಭಾರತ ನದಿ ನೀರನ್ನು ತಡೆಯುವ ಕಠೋರ ನೀತಿಯನ್ನು ಅನುಸರಿಸಲೇಬೇಕಿದೆ ಎಂದು ಗಡ್ಕರಿ ಎಚ್ಚರಿಸಿದರು.

ABOUT THE AUTHOR

...view details