ಕರ್ನಾಟಕ

karnataka

By

Published : Jun 24, 2020, 2:55 PM IST

ETV Bharat / bharat

ಮಕ್ಕಳೊಂದಿಗೆ ಪರಸ್ಪರ ಕಲಿಕೆಯಲ್ಲಿ ತೊಡಗಿದೆ ಬಾಲಿವುಡ್​ ದಂಪತಿ

ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಕೆಲಸಗಳು ಸ್ಥಗಿತಗೊಂಡಿವೆ. ಈ ನಡುವೆ ಬಾಲಿವುಡ್ ದಂಪತಿಗಳಾದ ಜೆನಿಲಿಯಾ ಮತ್ತು ರಿತೀಶ್ ದೇಶ್​ಮುಖ್ ತಮ್ಮ ಮಕ್ಕಳೊಂದಿಗೆ ಲಾತೂರ್‌ನಲ್ಲಿರುವ ತಮ್ಮ ಜಮೀನತ್ತ ಮುಖಮಾಡಿದ್ದಾರೆ. ಇದೇ ವೇಳೆ, ರಿತೀಶ್ ಡಿಜಿಟಲ್ ಶಿಕ್ಷಣಕ್ಕೆ ಆಧಾರಸ್ತಂಭವಾಗಿರುವ ದೇಶದ ಎಲ್ಲ ಶಿಕ್ಷಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

Riteish Deshmukh, Genelia D'Souza enjoys time with kids at farm
ಜಮೀನಿನಲ್ಲಿ ಮಕ್ಕಳೊಂದಿಗೆ ಪರಸ್ಪರ ಕಲಿಕೆಯಲ್ಲಿ ತೊಡಗಿದ್ದಾರೆ ಈ ಬಾಲಿವುಡ್​ ದಂಪತಿ

ಮುಂಬೈ(ಮಹಾರಾಷ್ಟ್ರ):ಕೊರೊನಾ ನಿಮಿತ್ತದ ಈ ಬಿಡುವಿನಲ್ಲಿಬಾಲಿವುಡ್ ದಂಪತಿಗಳಾದ ಜೆನಿಲಿಯಾ ಮತ್ತು ರಿತೀಶ್ ದೇಶ್​ಮುಖ್ ತಮ್ಮ ಮಕ್ಕಳೊಂದಿಗೆ ಲಾತೂರ್‌ನಲ್ಲಿರುವ ತಮ್ಮ ಜಮೀನಿನತ್ತ ಮುಖ ಮಾಡಿದ್ದಾರೆ.

ಜೆನಿಲಿಯಾ ತಮ್ಮ ಮಕ್ಕಳು ಮರದ ಕೆಳಗೆ ಕುಳಿತು ಅಧ್ಯಯನ ಮಾಡುವ ವಿಡಿಯೋವೊಂದನ್ನು ಈ ದಂಪತಿ ಹಂಚಿಕೊಂಡಿದ್ದು, ಹೀಗೆ ಬರೆದು ಕೊಂಡಿದ್ದಾರೆ.

"ಮಕ್ಕಳು ಎಂದರೆ ಅದ್ಭುತ ಮತ್ತು ಅವರು ಎಲ್ಲದಕ್ಕೂ ಹೊಂದಿಕೊಳ್ಳುವ ಗುಣ ಹೊಂದಿರುತ್ತಾರೆ. ಆದರೆ, ಪೋಷಕರಾದ ನಾವೇ ಈ ಕಾಲಘಟ್ಟದ ಪಯಣದಲ್ಲಿ ತುಂಬಾ ಕಳೆದು ಹೋಗಿದ್ದೇವೆ. ನಾನು ನಗರದಲ್ಲಿ ಬೆಳೆದವಳು ಆದರೆ, ರಿತೀಶ್ ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಬೆಳೆದಿದ್ದು, ಎರಡರ ಅನುಭವವೂ ಇದೆ. ಇದೇ ವಿಚಾರಕ್ಕೆ ನನಗೆ ರಿತೀಶ್​ ಮೇಲೆ ಅಸೂಯೆ ಇದೆ. ನಾನು ಮಕ್ಕಳನ್ನ ಪ್ರಕೃತಿ ಮಧ್ಯೆ ಪ್ರಾಣಿ ಪಕ್ಷಿಗಳ ಒಡನಾಟದಲ್ಲಿ ಬೆಳೆಸಬೇಕು ಎಂದು ಬಯಸುವವಳು. ಲಾಕ್‌ಡೌನ್ ಮಾಡಿ ಮೂರು ತಿಂಗಳಾಗಿದ್ದು, ನಾವು ಮುಂಬೈನಿಂದ ದೂರ ಅಂದರೆ ನಮ್ಮ ಹಳ್ಳಿಯಲ್ಲಿ ವಾಸಿಸುತ್ತಿದ್ದೇವೆ. ಈಗ ಲಾಕ್‌ಡೌನ್ ತೆಗೆದುಹಾಕಲಾಗಿದೆ. ಇದರಿಂದಾಗಿ ನಮ್ಮ ತೋಟಗಳಿಗೆ ಅದರ ಸೌಂದರ್ಯವನ್ನು ಸವಿಯಲು ಅವಕಾಶ ಸಿಕ್ಕಿದೆ. ಈ ನಡುವೆ ನಮ್ಮ ಮಕ್ಕಳೂ ಸಹ ಹೊಸ ತರಗತಿಗಳನ್ನ ಕಂಡುಕೊಂಡಿದ್ದಾರೆ. ಅವರು ನಾವೆಂದು ಕೊಂಡಂತೆ ಮರದ ಕೆಳಗೆ ಕುಳಿತು ಓದುತ್ತಾರೆ, ಬರೆಯುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಜಾಗೃತರಾಗಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿದ ನಟಿ ದಿಯಾ ಮಿರ್ಜಾ, "ಇದು ನಮ್ಮ ಮಕ್ಕಳಿಗೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು, ಲಾಕ್‌ಡೌನ್ ಸಮಯದಲ್ಲಿ ಜೆನಿಲಿಯಾ ತಮ್ಮ ಮಕ್ಕಳು ತಮ್ಮನ್ನು ವರ್ಚುವಲ್ ಶಾಲೆಗೆ ಹೇಗೆ ಹೊಂದಿಕೊಂಡಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಮಕ್ಕಳಿಗೆ ಬೇಕಾಗಿರುವುದು ಅವರ ಹೆತ್ತವರಿಂದ ಸ್ವಲ್ಪ ಪ್ರೀತಿ ಮತ್ತು ಒಂದಿಷ್ಟು ಸಮಯ ಇದ್ದರೆ ಅವರು ಚೆನ್ನಾಗಿಯೇ ಇರುತ್ತಾರೆ. ಅವರೊಂದಿಗೆ ನಾವು ಕಲಿಯೋಣ ಏಕೆಂದರೆ ಒಂಟಿಯಾಗಿ ಕಲಿಯುವುದಕ್ಕಿಂತ ಒಟ್ಟಿಗೆ ಕಲಿಯುವುದು ಉತ್ತಮ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇನ್ನು ಇದೇ ವೇಳೆ ರಿತೀಶ್, ಡಿಜಿಟಲ್ ಶಿಕ್ಷಣಕ್ಕೆ ಆಧಾರಸ್ತಂಭವಾಗಿರುವ ದೇಶದ ಎಲ್ಲ ಶಿಕ್ಷಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ

ABOUT THE AUTHOR

...view details