ಹಿಸ್ಸಾರ್(ಹರಿಯಾಣ): ಹರಿಯಾಣ 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು,ಶೇ 69.86ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.60.27ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾಗಿ ಬೋರ್ಡ್ ಮಾಹಿತಿ ನೀಡಿದೆ.
ವಿಶೇಷವೆಂದರೆ ಹಿಸ್ಸಾರ್ನ ಠಾಗೋರ್ ಸಿನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಿಶಿತಾ ಎಲ್ಲ ವಿಷಯಗಳಲ್ಲಿ 100ರಷ್ಟು ಅಂಕ ಪಡೆದು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದ್ದಾಳೆ. ಇಂಗ್ಲೀಷ್, ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಹಾಗೂ ಎಂಹೆಚ್ವಿಯಲ್ಲಿ 100ರಷ್ಟು ಅಂಕ ಪಡೆದುಕೊಂಡಿದ್ದು, ಇದರ ಆಧಾರದ ಮೇಲೆ ಮತ್ತೊಂದು ವಿಷಯಕ್ಕೂ 100ರಷ್ಟು ಅಂಕ ನೀಡಲಾಗಿದೆ.