ನವದೆಹಲಿ: ಜಾಗತಿಕ ಬಂಡವಾಳ ಹೂಡಿಕೆ ಸಂಸ್ಥೆಯಾದ ಕೊಲ್ಹ್ಬರ್ಗ್ ಕ್ರಾವಿಸ್ ರಾಬರ್ಟ್ಸ್ (ಕೆಕೆಆರ್)ನಿಂದ 5,550 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಹಿತಿ ನೀಡಿದೆ.
ಕೊಲ್ಹ್ಬರ್ಗ್ ಕ್ರಾವಿಸ್ ರಾಬರ್ಟ್ಸ್ ಸಂಸ್ಥೆಯು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್)ನಲ್ಲಿ ಶೇಕಡಾ 1.28ರಷ್ಟು ಷೇರುಗಳನ್ನು ಕೊಳ್ಳುವುದಾಗಿ ಸೆಪ್ಟೆಂಬರ್ 23ರಂದು ಘೋಷಣೆ ಮಾಡಿತ್ತು.
ಇದರಂತೆ ಕೊಲ್ಹ್ಬರ್ಗ್ ಕ್ರಾವಿಸ್ ರಾಬರ್ಟ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಅಲಿಸ್ಸಮ್ ಏಷಿಯಾ ಹೋಲ್ಡಿಂಗ್ಸ್ 2 ಪ್ರೈವೇಟ್ ಲಿಮಿಟೆಡ್ನಿಂದ 5,550 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಾಗಿದೆ ಎಂದು 81,348,479 ಈಕ್ವಿಟಿ ಷೇರುಗಳನ್ನು ಕೆಕೆಆರ್ಗೆ ನೀಡಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ.