ಕರ್ನಾಟಕ

karnataka

By

Published : Apr 16, 2020, 12:59 PM IST

ETV Bharat / bharat

ಒಗ್ಗೂಡಿ ಸಹಾಯ ಹಸ್ತ ಚಾಚೋಣ : ರಿಚಾ ಚಂದ

ಕೊರೊನಾ ಅಟ್ಟಹಾಸದಿಂದ ಮಾನವ ಜೀವಿಯ ಒಳ್ಳೆತನ ಹಾಗೂ ಕೆಟ್ಟತನ ಎರಡನ್ನೂ ಪ್ರದರ್ಶನವಾಗುತ್ತಿದೆ. ಆದರೀಗ ನಾವೆಲ್ಲರೂ ಒಗ್ಗೂಡಿ ಸಹಾಯ ಹಸ್ತ ಚಾಚಬೇಕಿದೆಯೆಂದು ನಟಿ ರಿಚಾ ಚಂದ ಅಭಿಪ್ರಾಯಪಟ್ಟಿದ್ದಾರೆ.

Richa Chadha feels pandemic bringing out worse, best in people
ನಟಿ ರಿಚಾ ಚಂದ

ನವದೆಹಲಿ: ಎಲ್ಲೆಡೆ ಹಬ್ಬಿರುವ ಮಹಾಮಾರಿ ಕೊರೊನಾ ವಾತಾವರಣ ಮಾನವನಲ್ಲಿನ ಒಳ್ಳೆ ಅಂಶ ಹಾಗೆ ಕೆಟ್ಟ ಅಂಶಗಳನ್ನು ಹೊರತರುತ್ತಿದೆ. ಇದುವೇ ನಾವೆಲ್ಲರೂ ಒಗ್ಗಟ್ಟಾಗಿ ಸಹಾಯಹಸ್ತ ಚಾಚುವ ಸಮಯ ಎಂದು ನಟಿ ರಿಚಾ ಚಂದ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಅಟ್ಟಹಾಸದಿಂದ ಮಾನವ ಜೀವಿಯ ಒಳ್ಳೆತನ ಹಾಗೂ ಕೆಟ್ಟತನ ಎರಡನ್ನೂ ಪ್ರದರ್ಶನವಾಗುತ್ತಿದೆ. ಕೆಲವರು ಬಡ ಜನರನ್ನು ಕೆಟ್ಟದಾಗಿ ನೋಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದು, ಅವರನ್ನು ರಕ್ಷಿಸಿ ಎಂದು ಐಎಎನ್​​ಎಸ್​​ಗೆ ಮನವಿ ಮಾಡಿದ್ದಾರೆ.

ಮಂಗಳವಾರ, ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಸುಮಾರು 3 ಸಾವಿರ ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ತಮ್ಮ ಸ್ಥಳಗಳಿಗೆ ತೆರಳಲು ಸಾರಿಗೆ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನುವ ವಿಷಯ ತಿಳಿಸಿದರು. ಅಂತಹ ಜನಸಾಗರವನ್ನು ಸಂಬಾಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಆ ವೇಳೆ, ಜನರನ್ನು ನಿಯಂತ್ರಿಸಲು ಪೊಲೀಸರು ಸ್ವಲ್ಪ ಮಟ್ಟಿನ ಲಾಠಿ ಚಾರ್ಜ್​ ಪ್ರಯೋಗಿಸಿದ್ದಾರೆ.

ಈ ಬಡ ವಲಸೆ ಕಾರ್ಮಿಕರು ಸದ್ಯ ಬಾಂದ್ರಾ ಮತ್ತು ಸೂರತ್‌ನಲ್ಲಿದ್ದು, ಅವರು ಸಮುದಾಯ ಪ್ರಸರಣಕ್ಕೆ ಕಾರಣವಾಗಬಹುದು ಎಂದು ಜನರು ಟೀಕಿಸುತ್ತಿದ್ದಾರೆ. ಆದರೆ, ಅವರೀಗ ಅಸಹಾಯಕರಾಗಿದ್ದಾರೆ, ನೆಲೆಸಲು ಮನೆಯಿಲ್ಲ, ಬಾಡಿಗೆ ಪಾವತಿಸಲು ಹಣವಿಲ್ಲದಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವೆಲ್ಲರೂ ಒಗ್ಗೂಡಿ ಸಹಾಯ ಮಾಡುವ ಸಮಯವಿದು. ಹಾಗಾಗಿ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆಂದು ನಾನು ನಂಬಿದ್ದೇನೆಂದು ತಿಳಿಸಿದರು.

ABOUT THE AUTHOR

...view details