ಮುಂಬೈ: ಸುಶಾಂತ್ ಸಿಂಗ್ ರಜಪೂತ್ಗೆ ಸಂಬಂಧಿಸಿದ ಹಣಕಾಸು ವ್ಯವಹಾರವನ್ನು ರಿಯಾ ಚಕ್ರವರ್ತಿ ನೋಡಿಕೊಳ್ಳುತ್ತಿದ್ದರು ಎಂದು ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ ಆರೋಪಿಸಿದ್ದಾರೆ. ಸುಶಾಂತ್ ಸಾವಿನ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಶ್ರುತಿ ತನಿಖೆಯ ವೇಳೆ ಸಿಬಿಐಗೆ ಈ ಮಾಹಿತಿ ನೀಡಿದ್ದಾರೆ.
ಸುಶಾಂತ್ ಹಣಕಾಸು ನಿರ್ವಹಣೆ ಮಾಡುತ್ತಿದ್ದರಂತೆ ರಿಯಾ: ಸಿಬಿಐ ತನಿಖೆಯಲ್ಲಿ ಶ್ರುತಿ ಮೋದಿ ಹೇಳಿಕೆ - ಸಿಬಿಐ ತನಿಖೆ
ಸುಶಾಂತ್ಗೆ ಸಂಬಂಧಿಸಿದ ಹಣಕಾಸು ವ್ಯವಹಾರವನ್ನು ರಿಯಾ ಚಕ್ರವರ್ತಿ ನೋಡಿಕೊಳ್ಳುತ್ತಿದ್ದರು ಎಂದು ಸಿಬಿಐ ತನಿಖೆಯ ವೇಳೆ ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ ಆರೋಪಿಸಿದ್ದಾರೆ.
ಸಿಬಿಐ ತನಿಖೆಯಲ್ಲಿ ಶ್ರುತಿ ಮೋದಿ
ಇನ್ನು ತನಿಖೆಯ ವೇಳೆ, "ನಾನು ಸುಶಾಂತ್ಗೆ ಔಷಧಿ ನೀಡುವ ವಿಚಾರದಲ್ಲಿ ಭಾಗಿಯಾಗಿಲ್ಲ. ಸುಶಾಂತ್ಗೆ ಬರುತ್ತಿದ್ದ ಪಾರ್ಸಲ್ಗಳನ್ನು ಸ್ವೀಕರಿಸಲು ಮಾತ್ರ ನನ್ನ ಕೆಲಸ ಸೀಮಿತವಾಗಿತ್ತು" ಎಂದು ಹೇಳಿದ್ದಾರೆ.
ಸುಶಾಂತ್ ಅವರ ತಂದೆ ಕೆ.ಕೆ.ಇಂದ್ರಜಿತ್, ತಾಯಿ ಸಂಧ್ಯಾ, ಆಕೆಯ ಸಹೋದರ ಶೋಯಿಕ್, ಶ್ರುತಿ, ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ, ಸಿದ್ಧಾರ್ಥ್ ಪಿಥಾನಿ ಮತ್ತು ಅಪರಿಚಿತ ಇತರರ ವಿರುದ್ಧ ಬಿಹಾರ ಪೊಲೀಸರು ಮೊಕದ್ದಮೆ ಹೂಡಿದ್ದರು.