ಗುವಾಹಟಿ (ಅಸ್ಸೋಂ):ಕೊರೊನಾ ರೋಗಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಲು ಮತ್ತು ವೈದ್ಯರು ನಡೆಸುವ ವರ್ಚುವಲ್ ಸಭೆಗಳಿಗೆ ಅನುಕೂಲವಾಗುವಂತೆ ಗುವಾಹಟಿಯ ರೆಸ್ಟೋರೆಂಟ್ವೊಂದರ ಮಾಲೀಕರೊಬ್ಬರು ರೋಬೋಟ್‌ಗಳನ್ನು ಮರುವಿನ್ಯಾಸಗೊಳಿಸಿದ್ದಾರೆ.
ಗ್ರಾಹಕರಿಗೆ ಪಾನೀಯಗಳನ್ನು ಪೂರೈಸಲು ನಾವು ಒಂದೂವರೆ ವರ್ಷಗಳಿಂದ ರೋಬೋಟ್‌ಗಳನ್ನು ಬಳಸುತ್ತಿದ್ದೇವೆ. ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಲ್ಲದೇ ರೋಬೋಟ್‌ನಿಂದ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಅವುಗಳನ್ನೀಗ ಮರುವಿನ್ಯಾಸಗೊಳಿಸಿದ್ದೇವೆ ಎಂದು ರೆಸ್ಟೋರೆಂಟ್ ಮಾಲೀಕ ಎಸ್.ಎನ್. ಫರೀದ್ ಹೇಳುತ್ತಾರೆ.