ತಿರುವರೂರು (ತಮಿಳುನಾಡು):ತಿರುವರಾರು ಜಿಲ್ಲೆಯ ತೆಂಗಲ್ ಗ್ರಾಮದ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಾಡಿನ ಮಧ್ಯದಲ್ಲಿಯೇ ವಾಸಿಸುತ್ತಿದ್ದಾರೆ.
ತಿರುವರೂರು ಜಿಲ್ಲೆಯಲ್ಲಿರುವ ತೆಂಗಲ್ ಗ್ರಾಮದ ದಿನಗೂಲಿ ಕಾರ್ಮಿಕರು ಕಳೆದ 50 ವರ್ಷಗಳಿಂದ ತಮ್ಮ ಕುಟುಂಬಗಳೊಂದಿಗೆ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದರು.
ಆದರೆ ಹೆದ್ದಾರಿ ಇಲಾಖೆಯು ಕೆಲವು ವರ್ಷಗಳ ಹಿಂದೆ ನಾಗಪಟ್ಟಣಂ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕಾಗಿ ಈ ಸ್ಥಳವನ್ನು ಖಾಲಿ ಮಾಡುವಂತೆ ಹೇಳಿ, ಅವರಿಗೆ ಪರ್ಯಾಯ ಸ್ಥಳ ನೀಡುವ ಭರವಸೆ ನೀಡಿತ್ತು.
ಅದರಂತೆ ಅವರಿಗೆ ಅಮ್ಮನಗರದ ಕರುವೇಲಂ ಕಾಡಿನ ಮಧ್ಯದಲ್ಲಿ ಜಾಗ ನೀಡಲಾಗಿದ್ದು, ವಿದ್ಯುತ್ ಸಂಪರ್ಕವೂ ಇಲ್ಲದೆ ಅವರು ಕಾಡಿನ ಮಧ್ಯೆ ವಾಸಿಸುತ್ತಿದ್ದಾರೆ. ಇದು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಮೇಲೆಯೂ ಹೆಚ್ಚು ಪರಿಣಾಮ ಬೀರುತ್ತಿದೆ.