ರಂಗಾರೆಡ್ಡಿ: ತೆಲಂಗಾಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಕೋಪಗೊಂಡ ಸ್ಥಳೀಯರು ಕಾರ್ಪೊರೇಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಹಯತ್ನಗರದಲ್ಲಿ ನಡೆದಿದೆ.
ಪ್ರವಾಹದಲ್ಲಿ ಮುಳುಗಿದ ಕಾಲೋನಿಗಳು: ಕೆರಳಿದ ಜನರಿಂದ ಕಾರ್ಪೊರೇಟರ್ ಮೇಲೆ ಹಲ್ಲೆ - Residents attacks corporater
ಪ್ರವಾಹದ ಅಬ್ಬರಕ್ಕೆ ಹೈದರಾಬಾದ್ ವ್ಯಾಪ್ತಿಯಲ್ಲಿ ಬರುವ ರಂಗಾರೆಡ್ಡಿ ಜಿಲ್ಲೆಯಲ್ಲಿನ ಹಲವು ಕಾಲೋನಿಗಳು ಹಾಗೂ ಜಮೀನುಗಳು ಜಲಾವೃತವಾಗಿವೆ. ಕಾಲುವೆ, ಚರಂಡಿ ಪ್ರದೇಶಗಳನ್ನು ಮುಚ್ಚಿ, ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವುದೇ ಈ ಅವಾಂತರಕ್ಕೆ ಕಾರಣವೆಂದು ಜನರು ಕಾರ್ಪೊರೇಟರ್ ಮೇಲೆ ಹಲ್ಲೆ ಮಾಡಿದ್ದಾರೆ.
ಕಾರ್ಪೋರೇಟರ್ ಮೇಲೆ ಸ್ಥಳೀಯರಿಂದ ಹಲ್ಲೆ
ಪ್ರವಾಹದ ನೀರಿನಲ್ಲಿ ಹೈದರಾಬಾದ್ ವ್ಯಾಪ್ತಿಯಲ್ಲಿ ಬರುವ ರಂಗಾರೆಡ್ಡಿ ಜಿಲ್ಲೆಯಲ್ಲಿನ ಹಲವು ಕಾಲೋನಿಗಳು ಹಾಗೂ ಜಮೀನುಗಳು ಜಲಾವೃತವಾಗಿವೆ. ಕಾಲುವೆ, ಚರಂಡಿ ಪ್ರದೇಶಗಳನ್ನು ಮುಚ್ಚಿ, ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವುದೇ ಈ ಅವಾಂತರಕ್ಕೆ ಕಾರಣವೆಂದು ಜನರು ಕಾರ್ಪೊರೇಟರ್ ತಿರುಮಲ ರೆಡ್ಡಿ ಅವರ ಮನೆಗೆ ನುಗ್ಗಿದ್ದಾರೆ.
ಈ ಹಿಂದೆಯೇ ಇದರ ಬಗ್ಗೆ ದೂರುಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಜನರು ಕೋಪಗೊಂಡು ತಿರುಮಲ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.