ನವದೆಹಲಿ:ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಖಂಡಿಸಿ ನವದೆಹಲಿಯಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಇಂದು ಸಹ ಮುಂದುವರೆದಿದೆ.
ಮುಂದುವರೆದ ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಖಂಡಿಸಿ ಖಾಸಗಿ ಹಾಗೂ ಸರ್ಕಾರ ವೈದ್ಯರು ಪ್ರತಿಭಟನೆ ಮುಂದುವರೆದಿದೆ. ಸಫ್ದರ್ಜಂಗ್ ಹಾಗೂ ಏಮ್ಸ್ ಆಸ್ಪತ್ರೆಯ ವೈದ್ಯರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ.
ಖಾಸಗಿ ಹಾಗೂ ಸರ್ಕಾರ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದು, ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ, ತುರ್ತು ಸೇವೆಗಳು ಮಾತ್ರ ಎಂದಿನಂತೆ ನಡೆಯುತ್ತಿವೆ. ಸಫ್ದರ್ಜಂಗ್ ಹಾಗೂ ಏಮ್ಸ್ ಆಸ್ಪತ್ರೆಯ ವೈದ್ಯರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ.
ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಆಫ್ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರೀಸರ್ಚ್ (ARD PGI) ನೀಡಿರುವ ಮಾಹಿತಿಯಂತೆ, ತುರ್ತು ಸೇವೆಗಳ ಹೊರತಾಗಿ ಮತ್ತೆಲ್ಲ ಸೇವೆಗಳು ಅನಿರ್ಧಿಷ್ಟಾವಧಿವರೆಗೆ ದೊರೆಯುವುದಿಲ್ಲ. ಎನ್ಎಂಸಿ ವಿಧೇಯಕದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರೆಸಲಿದ್ದಾರೆ.