ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಅರಿಶಿನದ ಮೂಲಕ ಕೋವಿಡ್​ ತಡೆಗಟ್ಟಲು ಮುಂದಾದ ಸಂಶೋಧಕರು - Dr Sabu Thomas

ಕೇರಳದ ಕೊಟ್ಟಾಯಂನ ಎಂ.ಜಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಕೋವಿಡ್​ ತಡೆಗಟ್ಟುವ ವಿಧಾನ ಮತ್ತು ಲಸಿಕೆಯ ಸಂಶೋಧನೆಯಲ್ಲಿ ತೊಡಗಿದ್ದು, ಅರಿಶಿನದಿಂದ ಬೇರ್ಪಡಿಸಿದ ಕರ್ಕ್ಯುಮಿನ್ ಎಂಬ ಅಂಶವು ಕೋವಿಡ್​ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಎಂಬ ಭರವಸೆ ಹೊಂದಿದೆ.

Researchers with Kottayam MG Varsity hopeful of preventing COVID through turmeric
Researchers with Kottayam MG Varsity hopeful of preventing COVID through turmeric

By

Published : May 3, 2020, 11:38 AM IST

Updated : May 3, 2020, 1:03 PM IST

ಕೊಟ್ಟಾಯಂ (ಕೇರಳ) : ಕೊರೊನಾ ವೈರಸ್​​ಗೆ ಲಸಿಕೆ ಕಂಡು ಹಿಡಿಯಲು ಪ್ರಪಂಚದಾದ್ಯಂತದ ಸಂಶೋಧಕರು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್​ ಹರಡುವಿಕೆಯನ್ನು ತಡೆಗಟ್ಟುವ ವಿಧಾನಗಳು ಮತ್ತು ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಾಬು ಥಾಮಸ್ ನೇತೃತ್ವದ ತಂಡವು ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿದೆ. ಅರಿಶಿನದಿಂದ ಪ್ರತ್ಯೇಕಿಸಲ್ಪಟ್ಟ ಕರ್ಕ್ಯುಮಿನ್ ಎಂಬ ಅಂಶವು ಕೋವಿಡ್​ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಎಂದು ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಭರವಸೆ ಹೊಂದಿದೆ. ಸದ್ಯ ಕೈಗೊಳ್ಳುತ್ತಿರುವ ಮೂರು ಸಂಶೋಧನಾ ಯೋಜನೆಗಳಲ್ಲಿ ಕರ್ಕ್ಯುಮಿನ್ ಅನಿವಾರ್ಯ ಅಂಶವಾಗಿದೆ. ಟೈಟಾನಿಯಂ ಡೈಆಕ್ಸೈಡ್, ಕರ್ಕ್ಯುಮಿನ್ ಮತ್ತು ಇತರ ಕೆಲವು ಘಟಕಗಳಿಂದ ತಯಾರಿಸಿದ ಲೇಪನವನ್ನು ಅವುಗಳ ನ್ಯಾನೊ ರೂಪದಲ್ಲಿ ಪಿಪಿಇಗಳು ಮತ್ತು ಮಾಸ್ಕ್​ಗಳಿಗೆ ಲೇಪಿಸುವುದರಿಂದ ಕೊರೊನಾ ವೈರಸ್​​ ಹರಡುವಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ ಎಂದು ಒಂದು ಅಧ್ಯಯನ ಹೇಳಿದೆ.

ಮತ್ತೊಂದು ಸಂಶೋಧನಾ ತಂಡ ಕೋವಿಡ್​ಗೆ ಲಸಿಕೆ ಕಂಡು ಹಿಡಿಯುವುದರಲ್ಲಿ ನಿರತವಾಗಿದೆ. ಈ ಸಂಶೋಧನಾ ಯೋಜನೆಗಳ ಅವಧಿ ಮೂರು ವರ್ಷ ಮತ್ತು ವೆಚ್ಚ 3 ಕೋಟಿ ರೂ. ಎಂಜಿ ವಿಶ್ವವಿದ್ಯಾಲಯದಲ್ಲಿ ಕೋವಿಡ್​ ತಡೆಗಟ್ಟುವಿಕೆ ಕುರಿತ ಎಲ್ಲಾ ಸಂಶೋಧನಾ ಚಟುವಟಿಕೆಗಳು ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳ ಸಹಯೋಗದಲ್ಲಿದೆ ಎಂದು ಡಾ.ಸಾಬು ಥಾಮಸ್ ತಿಳಿಸಿದ್ದಾರೆ.

Last Updated : May 3, 2020, 1:03 PM IST

ABOUT THE AUTHOR

...view details