ರಾಯಗಢ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮಹಾರಾಷ್ಟ್ರ ಕಟ್ಟಡ ಕುಸಿತ ಪ್ರಕರಣ: ಮುಂದುವರೆದ ರಕ್ಷಣಾ ಕಾರ್ಯ - Building collapse case
ನಿನ್ನೆ ಸಂಜೆ 6.50ರ ವೇಳೆಗೆ 5 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಹಾರಾಷ್ಟ್ರದ ಸಚಿವೆ ಅದಿತಿ ಎಸ್. ತತ್ಕರೆ ಮಾಹಿತಿ ನೀಡಿದ್ದಾರೆ.
ಕಟ್ಟಡ ಕುಸಿತ ಪ್ರಕರಣ
3 ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ ಒಂದು ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಲಾಗುತ್ತಿದೆ. ಇನ್ನು ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಮಹಾರಾಷ್ಟ್ರ ಸಚಿವೆ ಅದಿತಿ ತತ್ಕರೆ ಆಗ್ರಹ ಮಾಡಿದ್ದಾರೆ.
ಈವರೆಗೆ ಸುಮಾರು 60 ಜನರನ್ನು ರಕ್ಷಿಸಲಾಗಿದ್ದು, 25-30 ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.