ಕರ್ನಾಟಕ

karnataka

ETV Bharat / bharat

ಫುಲ್ಬಾರಿಯಲ್ಲಿ ಗಣತಂತ್ರ ಹಬ್ಬ... ಗಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಬಿಎಸ್​ಎಫ್​ ಯೋಧರು - ಗಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಬಿಎಸ್​ಎಫ್​ ಯೋಧರು

ದೇಶದೆಲ್ಲೆಡೆ 71 ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾರತ -ಬಾಂಗ್ಲಾದೇಶದ ಗಡಿಭಾಗವಾದ ಫುಲ್ಬಾರಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Republic celebration at Fulbari ,  BSF warriors sharing sweet at the border!
ಫುಲ್ಬಾರಿಯಲ್ಲಿ ಗಣತಂತ್ರ ಹಬ್ಬ...ಗಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಬಿಎಸ್​ಎಫ್​ ಯೋಧರು!

By

Published : Jan 26, 2020, 3:49 PM IST

ಫುಲ್ಬಾರಿ(ಪಶ್ಚಿಮ ಬಂಗಾಳ): ದೇಶದೆಲ್ಲೆಡೆ 71 ನೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆ ಭಾರತ-ಬಾಂಗ್ಲಾದೇಶದ ಗಡಿಭಾಗವಾದ ಫುಲ್ಬಾರಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ.

ಚರಿತ್ರೆಯ ಪುಟಗಳನ್ನು ತಿರುವಿದರೆ ಸಾಕು ಭಾರತ-ಬಾಂಗ್ಲಾದೇಶ ಸ್ನೇಹ-ಸಂಬಂಧ ಮೊದಲಿನಿಂದಲೂ ಉತ್ತಮವಾಗಿದೆ. ಅದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಇದೀಗ ಗಡಿಭಾಗ ಫುಲ್ಬಾರಿಯಲ್ಲಿ ಬಿಎಸ್‌ಎಫ್ ಪಡೆ ಯೋಧರು ಗಡಿ ಭಾಗದಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿರುವುದು ಮತ್ತಷ್ಟು ಆಕರ್ಷಕವಾಗಿ ಕಂಡುಬಂದಿದೆ.

2020ರ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಒಟ್ಟು 22 ಸ್ತಬ್ಧ ಚಿತ್ರಗಳ ಪ್ರದರ್ಶನವಾಗಿದ್ದು, ದೇಶದ ಎಲ್ಲಾ ನಾಗರೀಕರು ಈ ಸಡಗರವನ್ನು ಕಣ್ತುಂಬಿಕೊಂಡಿದ್ದಾರೆ.

ABOUT THE AUTHOR

...view details