ನವದೆಹಲಿ: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ವಿನಿಮಯ ಕಚೇರಿಯ ಮೇಲೆ ನಾಲ್ವರು ಭಯೋತ್ಪಾದಕರು ಗ್ರನೇಡ್ಗಳಿಂದ ದಾಳಿ ನಡೆಸಿದ್ದು, ಒಟ್ಟು 9 ಮಂದಿ ಮೃತ ಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.
ಭಯೋತ್ಪಾದಕರಿಂದ ಕರಾಚಿ ಷೇರು ವಿನಿಮಯ ಕೇಂದ್ರದ ಮೇಲೆ ದಾಳಿ: 9 ಸಾವು - ಕರಾಚಿಯಲ್ಲಿ ಭಯೋತ್ಪಾದಕರ ದಾಳಿ
ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು, ಈ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತಿಲ್ಲ.
ಭಯೋತ್ಪಾದಕರ ದಾಳಿ
ಈ ವೇಳೆ, ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದು, ಎಲ್ಲ ಉಗ್ರರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ದೊರಕಿದ್ದು, ಕರಾಚಿ ನಗರದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೇನಾ ಸಮವಸ್ತ್ರದಲ್ಲಿದ್ದ ಭಯೋತ್ಪಾದಕರನ್ನು ಮೊದಲಿಗೆ ಷೇರು ವಿನಿಮಯ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿ, ಪ್ರವೇಶ ದ್ವಾರದ ಮೇಲೆ ದಾಳಿ ನಡೆಸಿದರು. ಈ ವೇಳೆ, 9 ಮಂದಿ ಮೃತಪಟ್ಟಿದ್ದು, ನಂತರ ಸೇನೆ ಭಯೋತ್ಪಾದಕರನ್ನು ಸುತ್ತುವರಿದು ಎಲ್ಲರನ್ನೂ ಕೊಂದಿದೆ. ಈವರೆಗೂ ದಾಳಿಯ ಹೊಣೆಯನ್ನು ಯಾವ ಭಯೋತ್ಪಾದಕ ಸಂಘಟನೆಯೂ ಹೊತ್ತಿಲ್ಲ.
Last Updated : Jun 29, 2020, 2:01 PM IST