ಕರ್ನಾಟಕ

karnataka

ETV Bharat / bharat

ನಿಕೋಲಾ ಟೆಸ್ಲಾ: ಪರ್ಯಾಯ ಪ್ರವಾಹ ವಿದ್ಯುತ್ ಶಕ್ತಿಯ ಆವಿಷ್ಕಾರಕ್ಕಾಗಿ ಇವರು ಇಂದಿಗೂ ಪ್ರಸ್ತುತ - Alternating Current

ಖ್ಯಾತ ವಿಜ್ಞಾನಿಯೂ ಆಗಿರುವ ಟೆಸ್ಲಾ ಸಂಶೋಧನೆಗಳು ಹಲವು. ಪರ್ಯಾಯ ಪ್ರವಾಹ (Alternating Current) ವಿದ್ಯುತ್ ಸರಬರಾಜು ವ್ಯವಸ್ಥೆ ಬಗ್ಗೆ ಸಂಶೋಧನೆ ಮಾಡಿರುವ ಇವರಿಗೆ ಅದರ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ಆಧುನಿಕ ಜಗತ್ತಿನ ಬಳಕೆಗೆ ಅನುವು ಮಾಡಿಕೊಟ್ಟ ಕೀರ್ತಿ ಸಲ್ಲುತ್ತದೆ. ಇವರ ಸಂಶೋಧನೆಯ ಹಿನ್ನೆಲೆಯಿಂದ ಅಭಿವೃದ್ಧಿ ಹೊಂದಿದ ಹಲವು ತಂತ್ರಜ್ಞಾನಗಳನ್ನು ಜಗತ್ತು ಇಂದು ಬಳಸುತ್ತಿದೆ. ದೈನಂದಿನ ಜೀವನವನ್ನು ಸುಧಾರಿಸುವ ಹಾಗೂ ಸರಳಗೊಳಿಸುವ ಹಲವು ತಂತ್ರಜ್ಞಾನಗಳಳು ಈಗ ಬಂದಿದೆಯೆಂದರೆ ಅದಕ್ಕೆ ಮುನ್ನುಡಿ ಬರೆದವರು ಟೆಸ್ಲಾ.

Nikola Tesla
ನಿಕೋಲಾ ಟೆಸ್ಲಾ

By

Published : Jul 10, 2020, 12:30 PM IST

ಹೈದರಾಬಾದ್: ಇಂದು ಖ್ಯಾತ ಎಲೆಕ್ಟ್ರಿಕಲ್ ಎಂಜಿನಿಯರ್, ಮೆಕ್ಯಾನಿಕಲ್ ಎಂಜಿನಿಯರ್​ ಹಾಗೂ ಪ್ರಮುಖವಾಗಿ ಆಧುನಿಕ ಜಗತ್ತು ಬಳಸುತ್ತಿರುವ ಪರ್ಯಾಯ ಪ್ರವಾಹ ವಿದ್ಯುತ್ ಸರಬರಾಜು ವ್ಯವಸ್ಥೆಯ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ ನಿಕೋಲಾ ಟೆಸ್ಲಾ ಅವರ ಜನ್ಮ ದಿನ.

ನಿಕೋಲಾ ಟೆಸ್ಲಾ, ಸರ್ಬಿಯಾ-ಅಮೇರಿಕ ಸಂಶೋಧಕ. ಜುಲೈ 10, 1856 ರಂದು ಕ್ರೊಯೇಷಿಯಾದ ಸ್ಮಿಲ್ಜಾನ್‌ನಲ್ಲಿ ಜನಿಸಿದ ನಿಕೋಲಾ ಟೆಸ್ಲಾ, ತಮ್ಮ ತಾಯಿ ಡುಕಾ ಮಾಂಡಿಕ್ ಅವರ ಪ್ರೋತ್ಸಾಹದಿಂದ ವಿದ್ಯುತ್ ಆವಿಷ್ಕಾರದಲ್ಲಿ ತೊಡಗಿದರು. ತಮ್ಮ ಒಡಹುಟ್ಟಿದವರಾದ ಡೇನ್, ಏಂಜಲೀನಾ, ಮಿಲ್ಕಾ ಮತ್ತು ಮಾರಿಕಾ ಸೇರಿದಂತೆ ಐದು ಮಕ್ಕಳಲ್ಲಿ ಟೆಸ್ಲಾ ಒಬ್ಬರು.

1884 ರಲ್ಲಿ ಸರ್ಬಿಯಾದಿಂದ ನ್ಯೂಯಾರ್ಕ್ ನಗರಕ್ಕೆ ವಲಸೆ ಬಂದ ಟೆಸ್ಲಾ 1891ರಲ್ಲಿ ಅಮೆರಿಕದ ಪೌರತ್ವ ಪಡೆದರು. ಎಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್​ ಕ್ಷೇತ್ರದ ಸಂಶೋಧನೆಗೆ ಸಂಬಂಧಿಸಿದಂತೆ ಟೆಸ್ಲಾ ಸುಮಾರು 300 ಪೇಟೆಂಟ್‌(ಹಕ್ಕುಪತ್ರ)ಗಳನ್ನು ಹೊಂದಿದ್ದವರು. ಇವರು ಅಭಿವೃದ್ಧಿಪಡಿಸದ ಹಲವು ಸಂಶೋಧನೆಗಳು ಆಧುನಿಕ ಜಗತ್ತಿಗೆ ತುಂಬಾ ಅನುಕೂಲಕರವಾಗಿದೆ.

ನಿಕೋಲಾ ಟೆಸ್ಲಾ

ಖ್ಯಾತ ವಿಜ್ಞಾನಿಯೂ ಆಗಿರುವ ಟೆಸ್ಲಾ ಸಂಶೋಧನೆಗಳು ಹಲವು. ಪರ್ಯಾಯ ಪ್ರವಾಹ(Alternating Current) ವಿದ್ಯುತ್ ಸರಬರಾಜು ವ್ಯವಸ್ಥೆ ಬಗ್ಗೆ ಸಂಶೋಧನೆ ಮಾಡಿರುವ ಇವರಿಗೆ ಅದರ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ಆಧುನಿಕ ಜಗತ್ತಿನ ಬಳಕೆಗೆ ಅನುವು ಮಾಡಿಕೊಟ್ಟ ಕೀರ್ತಿ ಸಲ್ಲುತ್ತದೆ. ಇವರ ಸಂಶೋಧನೆಯ ಹಿನ್ನೆಲೆಯಿಂದ ಅಭಿವೃದ್ಧಿ ಹೊಂದಿದ ಹಲವು ತಂತ್ರಜ್ಞಾನಗಳನ್ನು ಜಗತ್ತು ಇಂದು ಬಳಸುತ್ತಿದೆ. ದೈನಂದಿನ ಜೀವನವನ್ನು ಸುಧಾರಿಸುವ ಹಾಗೂ ಸರಳಗೊಳಿಸುವ ಹಲವು ತಂತ್ರಜ್ಞಾನಗಳಳು ಈಗ ಬಂದಿದೆಯೆಂದರೆ ಅದಕ್ಕೆ ಮುನ್ನುಡಿ ಬರೆದವರು ಟೆಸ್ಲಾ.

ಟೆಸ್ಲಾ ಸಮಶೋಧನೆ ಬರೀ ಪರ್ಯಾಯ ಪ್ರವಾಹ ವಿದ್ಯುತ್​ ಕಡೆಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಇಂದು ಬಳಕೆಯಲ್ಲಿರುವ ಮೋಟಾರ್ಸ್, ರೇಡಿಯೋಸ್​, ಎಕ್ಸ್​ರೇ ಸೇರಿದಂತೆ ಕೆಲ ತಂತ್ರಜ್ಞಾನಗಳು ಟೆಸ್ಲಾ ಬುನಾದಿ ಹಾಕಿದ ಸಂಶೋಧನೆಗಳಿಂದ ಅಭಿವೃದ್ಧಿಗೊಂಡವು.

1994 ರಲ್ಲಿ ಅಮೆರಿಕಗೆ ಬಂದ ಟೆಸ್ಲಾ, ಥಾಮಸ್ ಎಡಿಸನ್ ಅವರೊಂದಿಗೂ ಕೆಲಸ ಮಾಡಿದ್ದರು. ಅವರು ತಮ್ಮ ಪರ್ಯಾಯ ಪ್ರವಾಹ ಯಂತ್ರೋಪಕರಣ ಸೇರಿದಂತೆ ಹಲವು ಪ್ರಮುಖ ಹಕ್ಕುಪತ್ರಗಳನ್ನು ಜಾರ್ಜ್ ವೆಸ್ಟಿಂಗ್‌ಹೌಸ್‌ಗೆ ಮಾರಾಟ ಮಾಡಿದ್ದರು. ಇಂದು ನಿಕೋಲಾ ಟೆಸ್ಲಾ ಅವರ ಹುಟ್ಟುಹಬ್ಬ. ಅವರ ಹಲವು ಸಂಶೋಧನೆಗಳು ಇಂದಿಗೂ ಅವರನ್ನು ನೆನಪಿಸುತ್ತದೆ.

ABOUT THE AUTHOR

...view details