ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳಲು ಪಕ್ಷಗಳ ನಡುವಿನ ಅರ್ಥಪೂರ್ಣ ಮತ್ತು ಸಕಾರಾತ್ಮಕ ಸಂವಾದದ ಮೂಲಕ ವಿವಿಧ ಧಾರ್ಮಿಕ ಸಿದ್ಧಾಂತಗಳ ನಡುವಿನ ವ್ಯತ್ಯಾಸಗಳನ್ನು ನಿರ್ವಹಿಸಬಹುದು. ಭಾರತದ ಪಿತಾಮಹ ಮಹಾತ್ಮ ಗಾಂಧಿ ಅವರು ‘ಶಾಂತಿಯ ನಂಬಿಕೆ’ಯನ್ನು ಕಾಪಾಡಿಕೊಳ್ಳಲು ಶಾಂತಿವಾದವನ್ನೇ ತಮ್ಮ ಧರ್ಮವನ್ನಾಗಿ ಸ್ವೀಕರಿಸಿ ಅನುಸರಿಸಿದ್ದರು.
ತಾಳ್ಮೆಯಿಲ್ಲದೆ ಶಾಂತಿವಾದ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಪರಸ್ಪರರು ಸಹಬಾಳ್ವೆಯ ಮುಖೇನ ಸಮಾಜದಲ್ಲಿ ಶಾಂತಿ ಸ್ಥಾಪಿಸಬಹುದು. ನಕಾರಾತ್ಮಕ ಸನ್ನಿವೇಶಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ದೈನಂದಿನ ಜೀವನದಲ್ಲಿನ ಶಾಂತಿಗೆ ಅವಕಾಶವಿರುವುದಿಲ್ಲ. ನಮ್ಮಲ್ಲಿ ಹಲವು ಬಗೆಯ ಶಾಂತಿಯ ವಾದಗಳಿವೆ. ಆದರೆ, ಅವೆಲ್ಲವೂಗಳಿಗೆ ಯುದ್ಧ ಮತ್ತು ಹಿಂಸಾಚಾರ ಸಮರ್ಥನೀಯವಲ್ಲ. ಘರ್ಷಣೆಯನ್ನೂ ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಬೇಕು. ಸಹಬಾಳ್ವೆಯ ತತ್ವಗಳ ಮೇಲೆ ಸ್ಥಾಪಿತವಾದ ಸಮಾಜದ ವೈವಿಧ್ಯತೆಯನ್ನು ಗೌರವಿಸಬೇಕಾಗುತ್ತದೆ. ಇದುವೇ ಉತ್ತಮವಾದ ನಡೆ.
ಲಿಯೋ ಟಾಲ್ ಸ್ಟಾಯ್, ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ವಿವರಿಸಿದ ವಿಚಾರಗಳಿಗೂ ಧಾರ್ಮಿಕ ಶಾಂತಿವಾದವೇ ಕೇಂದ್ರ ಬಿಂದುವಾಗಿದೆ. ಶಾಂತಿಪ್ರಿಯರು ಕೆಲವೊಮ್ಮೆ ಅಹಿಂಸೆಗೆ ಬದ್ಧರಾಗಿದ್ದಾರೆ. ಜೀವನ ವಿಧಾನ, ಶಾಂತಿಯುತ ಮತ್ತು ಸಾಮರಸ್ಯದ ಸಹಬಾಳ್ವೆ ದೃಷ್ಟಿಯತ್ತ ಗಮನಹರಿಸಬೇಕು. ಸಸ್ಯಾಹಾರಿ ಸೇವನೆ ಸೇರಿದಂತೆ ಜೀವನದ ಎಲ್ಲ ಆಯಾಮಗಳಲ್ಲಿ ಅಹಿಂಸೆಯ ಬದ್ಧತೆಯ ಕಡೆಗೆ ಶಾಂತಿವಾದವನ್ನು ವಿಸ್ತರಿಸಬಹುದು.
ಭಾರತದಂತಹ ಬಹು-ಧಾರ್ಮಿಕ ಸಮಾಜದಲ್ಲಿ ಶಾಂತಿವಾದ ಅಥವಾ ಸಹಬಾಳ್ವೆಯ ಅತ್ಯುತ್ತಮವಾದ ಉದಾಹರಣೆಯನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕಾಣಬಹುದು. ಆ ಸಮಯದಲ್ಲಿ ಗಾಂಧೀಜಿಯವರು ಆಂದೋಲನವನ್ನು ಆರಂಭಿಸಿ ತಾವೇ ಅದನ್ನು ಮುನ್ನಡೆಸಿದ್ದರು. ಧಾರ್ಮಿಕ ಸಹಬಾಳ್ವೆ, ಸಹನೆ, ಪರಸ್ಪರ ಗೌರವ ಮತ್ತು ಸಾರ್ವತ್ರಿಕ ಭ್ರಾತೃತ್ವದ ಪ್ರತಿಪಾದಕರಾಗಿದ್ದರು. ಭಾರತದ ರಾಜಕೀಯ ಮತ್ತು ಸಮಾಜದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸಮಾನ ಪಾಲು ಹೊಂದಬೇಕೆಂದು ಬಯಸಿದ್ದರು. ಇದನ್ನು ಸಾಧಿಸಲು ಎರಡೂ ಸಮುದಾಯಗಳನ್ನು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಾನ ಹೆಜ್ಜೆಯಾಗಿ ಪಾಲ್ಗೊಳ್ಳುವಂತೆ ನೋಡಿಕೊಂಡಿದ್ದರು. ಇದನ್ನು ಪ್ರಾಯೋಗಿಕವಾಗಿ ಸಾಧಿಸಲು ಆಗಾಗ ಸಲಹೆ ನೀಡಿದ್ದರು. ಖಿಲಾಫತ್ ಚಳವಳಿಯಲ್ಲಿ (1919-22) ಪರಿಪೂರ್ಣ ಅವಕಾಶವನ್ನು ಬಳಸಿಕೊಂಡಿದ್ದನ್ನು ಕಾಣಬಹುದು.
ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಟರ್ಕಿಯ ವಿರುದ್ಧ ಹೋರಾಟ ನಡೆಸಿತ್ತು. ಅರಬ್ ದೇಶದವರು ತುರ್ಕೀ ದೇಶದ ಒಟ್ಟೊಮನ್ ಸುಲ್ತಾನ್ನ ಇಸ್ಲಾಂ ಧರ್ಮದ ಖಲೀಫ್ ಅಧಿಕಾರವನ್ನು ಕಿತ್ತೆಸೆದಿದ್ದರು. ಅದನ್ನು ಉಳಿಸಿಕೊಳ್ಳಲು ಭಾರತೀಯ ಮುಸ್ಲಿಮರು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ತಂದು ನಡೆಸಿದ ಆಂದೋಲನವೆ ಖಿಲಾಫತ್ ಚಳವಳಿ (1919-1922). ತುರ್ಕೀಯ ಆ ಘಟನೆ ಭಾರತೀಯ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಗಾಯಗೊಳಿಸಿತು. ಅವರು ಬ್ರಿಟಿಷರ ವಿರೋಧಿ ಆಕ್ರಮಣಕಾರಿ ಮನೋಭಾವ ಅಳವಡಿಸಿಕೊಂಡರು. ಖಿಲಾಫತ್ ಆಂದೋಲನವನ್ನು ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿ ಎಂದೇ ಕರೆಯಲಾಯಿತು.
'ಖಿಲಾಫತ್ ಮತ್ತು ಅಸಹಕಾರ ಚಳುವಳಿ' ಎಂಬ ಏಕೀಕೃತ ಚಳವಳಿಯಡಿ ಮುಸ್ಲಿಮರನ್ನು ಒಂದೇ ಸೂರಿನಡಿ ತರಲು ಗಾಂಧೀಜಿಯವರು ಪ್ರಯತ್ನಿಸಿದ್ದರು.