ಹೈದರಾಬಾದ್ (ತೆಲಂಗಾಣ): ಮೊನ್ನೆ ಸುರಿದ ಭಾರೀ ಮಳೆಗೆ ಹೈದರಾಬಾದ್ ಸೇರಿದಂತೆ ತೆಲಂಗಾಣದ ಹಲವು ಪ್ರದೇಶಗಳು ಅಪಾರ ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಇತರ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿವೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಇಂದು ಮಳೆ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಲಿದ್ದಾರೆ. ಈ ಕುರಿತಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮಾತನಾಡಿ, ಅತೀ ಹೆಚ್ಚಿನ ನೀರು ನಿಲುಗಡೆಯಾದ ಸ್ಥಳಗಳಿಂದ ನೀರನ್ನು ಹೊರಹಾಕಲು, ಅಲ್ಲಿನ ನಾಗರಿಕರಿಗೆ ಸಹಾಯ ಮಾಡಲು ಹಾಗೂ ಆ ಪ್ರದೇಶಗಳಲ್ಲಿ ಸಂಚಾರವನ್ನು ಪುನಃಸ್ಥಾಪಿಸಲು ಪರಿಹಾರ ತಂಡಗಳು ಸತತವಾಗಿ ಕೆಲಸ ಮಾಡುತ್ತಿವೆ. ಅಲ್ಲದೆ 61 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ತಂಡ ಸೇರಿಸಿ ಪರಿಹಾರ ಕಾರ್ಯ ಮುಂದುವರಿಸಿವೆ ಎಂದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಸುಮಾರು 1.5 ಲಕ್ಷ ಆಹಾರ ಪ್ಯಾಕೆಟ್‌ಗಳನ್ನು ಸರಬರಾಜು ಮಾಡಲಾಗುತ್ತಿದ್ದು, ನೀರು ಸ್ಥಗಿತಗೊಂಡಿರುವ ನಗರ ಪ್ರದೇಶಗಳಲ್ಲಿ ಅನ್ನಪೂರ್ಣ ಸಬ್ಸಿಡಿ ಹೊಂದಿರುವ ಆಹಾರ ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ಅಲ್ಲದೆ ಈ ಪರಿಹಾರ ಶಿಬಿರಗಳು ಒಂದೆರಡು ದಿನಗಳವರೆಗೆ ಮುಂದುವರಿಯಲಿವೆ ಎಂದು ಹೇಳಿದರು.