ಚೆನ್ನೈ:ಸ್ವಂತ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಕಾರಣಕ್ಕೆ ರ್‍ಯಾಪಿಡೋ ಆ್ಯಪ್ ಬಳಕೆಗೆ ಮದ್ರಾಸ್ ಹೈಕೋರ್ಟ್ ಹೇರಿದ್ದ ನಿಷೇಧಕ್ಕೆ ದ್ವಿಸದಸ್ಯ ಪೀಠವು ತಾತ್ಕಾಲಿಕ ತಡೆ ನೀಡಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ವಾಹನಗಳಿಗೆ ಪ್ರತ್ಯೇಕ ತೆರಿಗೆ ಇದೆ. ಸ್ವಂತ ವಾಹನಗಳನ್ನು ಆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು. ವಾದ ವಿವಾದವನ್ನು ಆಲಿಸಿದ ಕೋರ್ಟ್, ರ್‍ಯಾಪಿಡೋ ಸೇವೆ ಮೇಲಿದ್ದ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಲ್ಲದೇ ರಾಜ್ಯ ಸರ್ಕಾರವು ವಾಣಿಜ್ಯ ಉದ್ದೇಶ ವಾಹನಗಳ ಬಳಕೆಗಾಗಿ ಕಾನೂನು ತಿದ್ದುಪಡಿ ಮಾಡಬೇಕು ಎಂದು ಸಲಹೆ ನೀಡಿದೆ.
ಸದ್ಯಕ್ಕೆ ಸಂಸ್ಥೆ ಏನು ಮಾಡಬೇಕು?: ಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದರಿಂದ ಮುಂದಿನ ವಿಚಾರಣೆ ವರೆಗೆ ಸಂಸ್ಥೆಯು ತನ್ನ ಸೇವೆಯನ್ನು ಮುಂದುವರಿಸಬಹುದಾಗಿದೆ.