ಕರ್ನಾಟಕ

karnataka

ETV Bharat / bharat

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಸಿಇಒಗೆ ಕೊರೊನಾ ಸೋಂಕು - Reliance Entertainment Group CEO

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಸಿಇಒ ಶಿಬಶಿಶ್ ಸರ್ಕಾರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಅವರು ಕೋಕಿಲಾಬೆನ್​​ ಅಂಬಾನಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಸಿಇಒ ಶಿಬಶಿಶ್ ಸರ್ಕಾರ್
ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಸಿಇಒ ಶಿಬಶಿಶ್ ಸರ್ಕಾರ್

By

Published : May 31, 2020, 7:39 PM IST

ಮುಂಬೈ:ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ ಗ್ರೂಪ್​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಬಶಿಶ್ ಸರ್ಕಾರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು, ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರ್​ ಅವರಿಗೆ ಜ್ವರ ಕಾಣಿಸಿಕೊಂಡ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸರ್ಕಾರ್ ಅವರ ಪರೀಕ್ಷಾ ಫಲಿತಾಂಶ ಬಂದರೂ ಅದನ್ನು ಬಹಿರಂಗಪಡಿಸಿರಲಿಲ್ಲ.

ಶಿಬಶಿಶ್ ಸರ್ಕಾರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಜ್ವರದ ತೀವ್ರತೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರ್ ಅವರು ಗುರುವಾರ ವೆಬ್​​ನಿಯರ್​​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಮುಂಬರುವ ಎರಡು ಕಾರ್ಯಕ್ರಮಗಳಾದ ಸೂರ್ಯವಂಶಿ ಮತ್ತು 83 ಯೋಜನೆ ಕುರಿತು ಮಾತನಾಡಿ, ಕೊರೊನಾ ವೈರಸ್​​ ಸಾಂಕ್ರಾಮಿಕ ರೋಗದಿಂದ ವಿಳಂಬವಾಗಿವೆ ಎಂದಿದ್ದರು. ಈಗ ಅವರೇ ಕೊರೊನಾ ಸೋಂಕಿತರಾಗಿದ್ದಾರೆ.

ABOUT THE AUTHOR

...view details