ಕರ್ನಾಟಕ

karnataka

ಕ್ರಿಸ್​​ ಲಿನ್​ ಕೈಬಿಟ್ಟು ಕೆಕೆಆರ್​ ಕೈಸುಟ್ಟುಕೊಳ್ತು... ಆಸ್ಟ್ರೇಲಿಯಾ ಆಟಗಾರನ ಆರ್ಭಟಕ್ಕೆ ಯುವಿ ಫಿದಾ!

By

Published : Nov 19, 2019, 7:04 AM IST

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಕ್ರಿಸ್​ ಲಿನ್​ಗೆ ಕೈಬಿಟ್ಟಿದ್ದು, ಈ ವಿಚಾರವಾಗಿ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್ ಮಾತನಾಡಿದ್ದಾರೆ.

ಕ್ರಿಸ್​​ ಲಿನ್​

ಮುಂಬೈ:ಮುಂದಿನ ವರ್ಷ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಎಲ್ಲ ಪ್ರಾಂಚೈಸಿ ತಮ್ಮ ತಮ್ಮ ತಂಡ ಬಲಿಷ್ಠ ಮಾಡಿಕೊಳ್ಳುತ್ತಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​ ಕೂಡ ಕೆಲ ಮಹತ್ವದ ಪ್ಲೇಯರ್ಸ್​ಗಳಿಗೆ ತಂಡದಿಂದ ಗೇಟ್​ಪಾಸ್​ ನೀಡಿದೆ.

ತಂಡದಿಂದ ಆರಂಭಿಕ ಪ್ಲೇಯರ್​​​​ ಕ್ರಿಸ್​ ಲಿನ್​ಗೆ ತಂಡದಿಂದ ಹೊರಹಾಕಿದ್ದು, ಇದೀಗ ಅದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಆವೃತ್ತಿಯಲ್ಲಿ ಅವರು ಚೆನ್ನಾಗಿ ಆಡಿಲ್ಲ ಎಂದು ಇದೀಗ ಕೈಬಿಟ್ಟಿದೆ. ಆದರೆ ಲೀನ್​ ಟಿ10 ಲೀಗ್​ನಲ್ಲಿ ಆರ್ಭಟಿಸಿದ್ದು, ತಾವು ಎದುರಿಸಿರುವ 30 ಎಸೆತಗಳಲ್ಲಿ 90ರನ್​ಗಳಿಕೆ ಮಾಡಿ ಎಲ್ಲರು ಹೆಬ್ಬೇರುವಂತೆ ಮಾಡಿದ್ದಾರೆ. ಇದು ಟಿ10 ಕ್ರಿಕೆಟ್​​ನಲ್ಲಿ ಮೂಡಿ ಬಂದಿರುವ ಅತಿದೊಡ್ಡ ಸ್ಕೋರ್​ ಆಗಿದೆ.

ಮರಾಠ ಅರೇಬಿಯನ್ಸ್‌ ತಂಡದ ಪರ ಬ್ಯಾಟ್​ ಬೀಸಿರುವ 29 ವರ್ಷದ ಬಲಗೈ ಬ್ಯಾಟ್ಸ್‌ಮನ್‌, ಕೇವಲ 30 ಎಸೆತಗಳಲ್ಲಿ 9 ಫೋರ್‌ ಮತ್ತು 7 ಸಿಕ್ಸರ್ ಸೇರಿ 91 ರನ್​ ಸಿಡಿಸಿ ಮಿಂಚಿದ್ದು, ಇವರ ಆಟಕ್ಕೆ ಯುವರಾಜ್​ ಸಿಂಗ್​ ಸಹ ಫಿದಾ ಆಗಿದ್ದಾರೆ. ಇದೇ ವೇಳೆ ಟ್ವೀಟ್​ ಮಾಡಿರುವ ಯುವರಾಜ್​ ಸಿಂಗ್​ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಕ್ರಿಸ್​ ಲಿನ್​ ಅವರನ್ನ ಕೈಬಿಟ್ಟು ದೊಡ್ಡ ತಪ್ಪು ಮಾಡಿದ್ದು, ಇದೀಗ ಶಾರುಖ್​ ಖಾನ್​ಗೆ ಅವರಿಗೆ ಸರಿಯಾದ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.

ಕೆಲವೊಂದು ಪಂದ್ಯಗಳಲ್ಲಿ ಕೋಲ್ಕತ್ತಾ ತಂಡಕ್ಕೆ ಅದ್ಭುತ ಆರಂಭ ಒದಗಿಸಿದ್ದ ಈ ಪ್ಲೇಯರ್​ಗೆ ಯಾವ ಕಾರಣಕ್ಕಾಗಿ ಅವರು ತಂಡದಿಂದ ಕೈಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇಂದಿನ ಅವರ ಆಟ ನಿಜಕ್ಕೂ ಅಮೋಘವಾಗಿತ್ತು ಎಂದು ತಿಳಿಸಿದ್ದಾರೆ.

ABOUT THE AUTHOR

...view details