ಕಾಂಗ್ರಾ (ಹಿಮಾಚಲ ಪ್ರದೆಶ): 35 ವರ್ಷದ ಸುರ್ಜಿತ್ ಕುಮಾರ್ ಎಂಬ ವ್ಯಕ್ತಿಯ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್ ವಿರುದ್ದ ದಾದಾಸಿಬಾ ಮಾರುಕಟ್ಟೆಯಲ್ಲಿ ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸ್ ಮೇಲೆಯೂ ಮಹಿಳೆಯರು ಹಲ್ಲೆ ಮಾಡಿದ್ದಾರೆ.
ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ ಮಹಿಳೆಯರು ಪ್ರಕರಣದ ತನಿಖೆ ಕುರಿತು ಪೊಲೀಸರ ಕಾರ್ಯವೈಖರಿಯಿಂದ ಕೋಪಗೊಂಡು ಮೃತ ದೇಹವನ್ನು ರಸ್ತೆಯ ಮೇಲೆ ಇರಿಸುವ ಮೂಲಕ ಧರಣಿ ನಡೆಸಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತನ ಕುಟುಂಬ ಸದಸ್ಯರು ತಮ್ಮ ಮಗನ ಕೊಲೆಗಾರನನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪೊಲೀಸರಿಗೊಬ್ಬರಿಗೆ ಥಳಿಸಿದ್ದಾರೆ. ಮಹಿಳೆಯರ ಆಕ್ರೋಶವನ್ನ ತಣಿಸುವಲ್ಲಿ ಯಶಸ್ವಿ ಆಗಿರುವ ಪೊಲೀಸ್ ಅಧಿಕಾರಿಗಳು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.