ಕರ್ನಾಟಕ

karnataka

ETV Bharat / bharat

ಕೋವಿಡ್​-19 ಪರೀಕ್ಷೆಗೆ ನೋ ಎಂದ ಬಾಲಿವುಡ್​ ನಟಿ ರೇಖಾ - ಮಹಾರಾಷ್ಟ್ರದ ಮುಂಬೈ

ಕಳೆದ ವಾರಾಂತ್ಯದಲ್ಲಿ, 'ಸೀ ಸ್ಪ್ರಿಂಗ್ಸ್' ಹೆಸರಿನ ರೇಖಾ ಅವರ ಬಂಗಲೆಗಳನ್ನು ಕಂಟೇನ್‌ಮೆಂಟ್‌ ವಲಯವೆಂದು ಘೋಷಿಸಿದೆ ಹಾಗೂ ಬಿಎಂಸಿ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ ಎಂದು ವರದಿಯಾಗಿತ್ತು..

Rekha unwilling to get tested for COVID-19
ಕೋವಿಡ್​-19 ಪರೀಕ್ಷೆಗೆ ನೋ ಎಂದ ಬಾಲಿವುಡ್​ ನಟಿ ರೇಖಾ...!!

By

Published : Jul 15, 2020, 7:00 PM IST

ಮುಂಬೈ(ಮಹಾರಾಷ್ಟ್ರ):ಬಾಲಿವುಡ್‌ನ ಹಿರಿಯ ನಟಿ ರೇಖಾ ಅವರ ಭದ್ರತಾ ಸಿಬ್ಬಂದಿಗೆ ಕಳೆದ ವಾರ ಕೊರೊನಾ ಸೋಂಕು​ ತಗುಲಿರುವುದು ದೃಢವಾಗಿತ್ತು. ನಿಯಮಗಳ ಪ್ರಕಾರ, ನಟಿ ಸೇರಿದಂತೆ ಮನೆಯಲ್ಲಿ ವಾಸಿಸುವ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ಆದರೆ, ವರದಿಗಳ ಪ್ರಕಾರ, ನಟಿ ಪರೀಕ್ಷೆಗೆ ಒಳಗಾಗಲು ಸಿದ್ಧರಿಲ್ಲ ಮತ್ತು ನೈರ್ಮಲ್ಯೀಕರಣ ಪ್ರಕ್ರಿಯೆಯನ್ನು ಕೈಗೊಳ್ಳಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನುಮತಿಸಿಲ್ಲ ಎಂದು ತಿಳಿದು ಬಂದಿದೆ.

ಬಾಲಿವುಡ್‌ನ ಹಿರಿಯ ನಟಿ ರೇಖಾ

ವಿವಿಧ ವರದಿಗಳ ಪ್ರಕಾರ, ಅಧಿಕಾರಿಗಳು ರೇಖಾ ಅವರ ಬಂಗಲೆ ತಲುಪಿದಾಗ ಅವರ ವ್ಯವಸ್ಥಾಪಕಿ ಫರ್ಜಾನಾ ಅಧಿಕಾರಿಗಳಿಗೆ ತಮ್ಮ ಸಂಖ್ಯೆಯನ್ನು ನೀಡಿ ಬರುವ ಮೊದಲು ಕರೆ ಮಾಡಿ ತಿಳಿಸುವಂತೆ ಹೇಳಿದ್ದಾರೆ. ಆ ನಂತರ ರೇಖಾ ಅವರು ಕೋವಿಡ್​-19 ಸೋಂಕು ಇದ್ದಂತಹ ಯಾರೊಬ್ಬರು ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಅವರಿಗೆ ಕೋವಿಡ್​-19 ಪರೀಕ್ಷೆಯ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಯಿತು.

ಕಳೆದ ವಾರಾಂತ್ಯದಲ್ಲಿ, 'ಸೀ ಸ್ಪ್ರಿಂಗ್ಸ್' ಹೆಸರಿನ ರೇಖಾ ಅವರ ಬಂಗಲೆಗಳನ್ನು ಕಂಟೇನ್‌ಮೆಂಟ್‌ ವಲಯವೆಂದು ಘೋಷಿಸಿದೆ ಹಾಗೂ ಬಿಎಂಸಿ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ ಎಂದು ವರದಿಯಾಗಿತ್ತು. ಆದರೆ, ಕಳೆದ ಕೆಲವು ವಾರಗಳಿಂದ ಪ್ರತ್ಯೇಕತೆಯಲ್ಲಿ ವಾಸಿಸುತ್ತಿರುವ ಈ ನಟಿಗೆ ಕೋವಿಡ್​ ಪರೀಕ್ಷೆಯನ್ನು ಮಾಡಲಾಗಿದೆಯೇ? ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ABOUT THE AUTHOR

...view details