ಕರ್ನಾಟಕ

karnataka

ETV Bharat / bharat

ಸೆ.14 ರಿಂದ ಸಂಸತ್ ಮುಂಗಾರು‌ ಅಧಿವೇಶ; ರಾಜ್ಯಸಭೆಯಲ್ಲಿ ಪೂರ್ವಾಭ್ಯಾಸ - ರಾಜ್ಯಸಭೆ ಸಭಾಪತಿ

ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ ಮುಂಗಾರು ಅಧಿವೇಶನಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಇಂದು ರಾಜ್ಯಸಭೆಯಲ್ಲಿ ಕಲಾಪದ ಪೂರ್ವಾಭ್ಯಾಸ ನಡೆಸಿದ್ದಾರೆ.

rehearsal-for-rajya-sabha-monsoon-session-held-to-contain-covid-19-spread
ಸೆ.14 ರಿಂದ ಸಂಸತ್ ಮುಂಗಾರು‌ ಅಧಿವೇಶ; ರಾಜ್ಯಸಭೆಯಲ್ಲಿ ಪೂರ್ವಾಭ್ಯಾಸ

By

Published : Sep 9, 2020, 6:55 PM IST

ನವದೆಹಲಿ:ಇದೇ 14 ರಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮತ್ತವರ ಸಿಬ್ಬಂದಿ ರಾಜ್ಯಸಭೆಯಲ್ಲಿ ಕಲಾಪದ ಪೂರ್ವಾಭ್ಯಾಸ ನಡೆಸಿದರು.

ದೇಶದಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ನಾಯ್ಡು ಅವರ ಪೂರ್ವಾಭ್ಯಾಸದ ಬಳಿಕ ಯುವಜನ ಶ್ರಮಿಕ ರೈತ ಕಾಂಗ್ರೆಸ್‌ ಪಕ್ಷದ ನಾಯಕ ಪರಿಮಾಳ್‌ ನಥುವಾನಿ ಪ್ರಮಾಣ ವಚನ ಸ್ವೀಕರಿಸಿದರು.

ಆಂಧ್ರಪ್ರದೇಶದಿಂದ ಸತತ 3ನೇ ಬಾರಿಗೆ ಪರಿಮಲ್‌ ನಥ್ವಾನಿ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದಾರೆ. 2008ರಲ್ಲಿ ಮೊದಲ ಬಾರಿ, 2014ರಲ್ಲಿ 2ನೇ ಬಾರಿಗೆ ಮೇಲ್ಮನೆಗೆ ಪ್ರವೇಶ ಮಾಡಿದ್ದರು. ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ದೇಶ್‌ ದೀಪಕ್‌ ವರ್ಮಾ ಮತ್ತು ಇತರೆ ಹಿರಿಯ ಅಧಿಕಾರಿಗಳು ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೆ ಹೊಸ ಸ್ಪರ್ಶ ನೀಡಲಾಗಿದ್ದು, ಉಭಯ ಕಲಾಪಗಳ ಒಳಗೆ ಮತ್ತು ಗ್ಯಾಲರಿಯಿಂದ ವೀಕ್ಷಣೆಗೆ ದೊಡ್ಡ ಪರದೆಗಳು, ಆಡಿಯೋ ಸಿಸ್ಟಂ, ಸ್ಪೆಷಲ್‌ ಕೇಬಲ್‌ ಸಂಪರ್ಕ ಕಲ್ಪಿಸಲಾಗಿದೆ. ಈ ಬಾರಿ ಕಲಾಪದ ಅವಧಿಯಲ್ಲಿ ವಾರದ ರಜೆ ಅಥವಾ ಇತರೆ ಯಾವುದೇ ರಜೆಗಳು ಇರುವುದಿಲ್ಲ.

ABOUT THE AUTHOR

...view details