ಕರ್ನಾಟಕ

karnataka

ETV Bharat / bharat

ಇತರರಿಗೆ ನಿವಾಸ ಪ್ರಮಾಣಪತ್ರ ನೀಡುವ ಮೊದಲು ನಮಗೆ ಪುನರ್ವಸತಿ ಕಲ್ಪಿಸಿ : ಕಾಶ್ಮೀರಿ ಪಂಡಿತರ ಸಂಘಟನೆ - ಜಮ್ಮು ಮತ್ತು ಕಾಶ್ಮೀರ ಸುದ್ದಿ

ಕಣಿವೆಯ ಹತ್ತು ಜಿಲ್ಲೆಗಳಲ್ಲಿ ವಲಸೆ ಬಂದ ಮತ್ತು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಪುನರ್ವಸತಿ ಮಾಡಲಾಗುವುದು ಎಂದು ಪ್ರಸ್ತುತ ಸರ್ಕಾರ ತಿಳಿಸಿತ್ತು. ಆದರೆ ಇಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ಆಂದೋಲನ ನಡೆದಿಲ್ಲ. ಭಾರತ ಸರ್ಕಾರವು ತಕ್ಷಣವೇ ಕಾಶ್ಮೀರಿ ಪಂಡಿತ್ ಪುನರ್ವಸತಿ ನೀತಿಯನ್ನು ತರಬೇಕು ಎಂದು ವಲಸೆ ಬಂದ ಕಾಶ್ಮೀರಿ ಪಂಡಿತರ ಸಂಘಟನೆ ಹೇಳಿದೆ.

ಕಾಶ್ಮೀರಿ ಪಂಡಿತ್ ಪುನರ್ವಸತಿ ನೀತಿ
ಕಾಶ್ಮೀರಿ ಪಂಡಿತ್ ಪುನರ್ವಸತಿ ನೀತಿ

By

Published : Jun 28, 2020, 5:02 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತರರಿಗೆ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಮೊದಲು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸತೀಶ್ ಮಹಲ್ದಾರ್ ನೇತೃತ್ವದ ವಲಸೆ ಬಂದ ಕಾಶ್ಮೀರಿ ಪಂಡಿತರ ಸಂಘಟನೆ ಒತ್ತಾಯಿಸಿದೆ.

ಕಾಶ್ಮೀರಿ ಪಂಡಿತರನ್ನು ಕಣಿವೆಯಲ್ಲಿ ಪುನರ್ವಸತಿಗೊಳಿಸುವವರೆಗೆ ನಿವಾಸ ಪ್ರಮಾಣಪತ್ರಗಳ ವಿತರಣೆಯನ್ನು ನಿಲ್ಲಿಸುವಂತೆ ನಾವು ಒತ್ತಾಯಿಸುತ್ತೇವೆ. ಕಾಶ್ಮೀರಿ ಪಂಡಿತರ ವೆಚ್ಚದಲ್ಲಿ ಅನಿವಾಸಿಗಳು ಮತ್ತು ಇತರ ನಿರಾಶ್ರಿತರನ್ನು ಸಂತೋಷಪಡಿಸುವಲ್ಲಿ ಭಾರತ ಸರ್ಕಾರ ನಿರತವಾಗಿದೆ ಎಂದು ತೋರುತ್ತದೆ. ಕಣಿವೆಯ ಹತ್ತು ಜಿಲ್ಲೆಗಳಲ್ಲಿ ವಲಸೆ ಬಂದ ಮತ್ತು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಪುನರ್ವಸತಿ ಮಾಡಲಾಗುವುದು ಎಂದು ಪ್ರಸ್ತುತ ಸರ್ಕಾರ ತಿಳಿಸಿತ್ತು. ಆದರೆ ಇಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ಆಂದೋಲನ ನಡೆದಿಲ್ಲ. ಭಾರತ ಸರ್ಕಾರವು ತಕ್ಷಣವೇ ಕಾಶ್ಮೀರಿ ಪಂಡಿತ್ ಪುನರ್ವಸತಿ ನೀತಿಯನ್ನು ತರಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಸಂಘಟನೆ ಹೇಳಿದೆ.

ಯಾವುದೇ ವ್ಯಕ್ತಿಗೆ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಮೊದಲು ಇದನ್ನು ಘೋಷಿಸಬೇಕು. ನಿವಾಸ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ವಲಸೆ ಬಂದ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಮೊದಲು ಹೊರಗಿನವರಿಗೆ ನಿವಾಸ ಪ್ರಮಾಣಪತ್ರ ನೀಡುವುದು ಪ್ರಜಾಪ್ರಭುತ್ವ, ಸಾಂವಿಧಾನಿಕ ಮತ್ತು ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದೆ.

ನಮ್ಮ ಸಮುದಾಯದ ಅವಸ್ಥೆ ದೇಶದ ಅನೇಕ ರಾಜಕೀಯ ಪಕ್ಷಗಳಿಗೆ ಮೇವಿನಂತಾಗಿದೆ. ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುವ ಪ್ರಮುಖ ಸಾಧನಗಳಲ್ಲಿ ನಮ್ಮ ಸ್ಥಿತಿಯೂ ಸೇರಿದೆ. ಆದರೆ, ನಮ್ಮ ಪರವಾಗಿ ತೆಗೆದುಕೊಳ್ಳಬೇಕಾದ ಪ್ರಾಯೋಗಿಕ ಕ್ರಮಗಳ ವಿಷಯಕ್ಕೆ ಬಂದರೆ, ಕಳೆದ ದಶಕಗಳಿಂದ ಭಾರತ ಸರ್ಕಾರ ಸತತವಾಗಿ ವಿಫಲವಾಗುತ್ತಿದೆ. ಮೋದಿ ಸರ್ಕಾರದಿಂದ ನಮಗೆ ಭರವಸೆಗಳಿವೆ. ಆದರೆ ಇದುವರೆಗೆ ನಮ್ಮ ಪುನರ್ವಸತಿ ನೀತಿಯ ಬಗ್ಗೆ ಏನೂ ಹೊರಬಂದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

ABOUT THE AUTHOR

...view details