ತಿರುವನಂತಪುರಂ(ಕೇರಳ): ಕೇಂದ್ರವು ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೋಳ್ಳಲು ಯೋಚಿಸುತ್ತಿದೆ. ಹೀಗಿರುವಾಗ ವಿದೇಶದಿಂದ ರಾಜ್ಯಕ್ಕೆ ಬರಲು ಇಚ್ಛಿಸುವಂತ ಕೇರಳಿಗರಿಗಾಗಿ ರಾಜ್ಯ ಸರ್ಕಾರ ವೆಬ್ಸೈಟ್ ಬಿಡುಗಡೆ ಮಾಡಿದೆ.
ವಿದೇಶದಿಂದ ಮರಳಲು ಬಯಸುವವರೆಲ್ಲರೂ ಈ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ವಲಸೆಗಾರರ ಅಧಿಕೃತ ಸಂಸ್ಥೆಯಾದ ನಾರ್ಕಾ-ರೂಟ್ಸ್‌ನ www.norkaroots.org ಯಲ್ಲಿ ನೋಂದಣಿ ಮಾಡಬೇಕಾಗಿದೆ.
ಅಂದಾಜು 25 ಲಕ್ಷ ಅನಿವಾಸಿ ಕೇರಳಿಗರಲ್ಲಿ, 90 ರಷ್ಟು ಮಂದಿ ಮಧ್ಯಪ್ರಾಚ್ಯ ದೇಶಗಳಲ್ಲಿದ್ದಾರೆ. 3 ರಿಂದ 5 ಲಕ್ಷ ಜನರು ವಾಯು ಮಾರ್ಗದ ಮೂಲಕ ಮರಳುವ ಸಾಧ್ಯತೆಯಿದೆ. ಈ ನೋಂದಣಿಯು ವಿಮಾನದಲ್ಲಿ ಸೀಟು ಹಂಚಿಕೆಗಾಗಿ ಅಲ್ಲ, ವಿದೇಶದಿಂದ ಆಗಮಿಸುವವರಿಗೆ ಕ್ವಾರಂಟೈನ್ ಮತ್ತು ಐಸೋಲೇಷನ್ ವ್ಯವಸ್ಥೆ ಮಾಡಲು ಸಹಕಾರಿಯಾಗುತ್ತದೆ ಎಂದು ನಾರ್ಕಾ ರೂಟ್ಸ್ ಹೇಳಿದೆ.
ವಿದೇಶದಿಂದ ಬರುವ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೊರೊನಾ ರೋಗ ಲಕ್ಷಣಗಳಿಲ್ಲದವರಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ತಿಳಿಸಿಲಾಗುತ್ತದೆ. ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂತವರನ್ನು ಪ್ರತ್ಯೇಕಿಸಲಾಗುತ್ತದೆ ಎಂದು ಹೇಳಲಾಗಿದೆ.