ನವದೆಹಲಿ: #MyGovSamvaad ನ ಹೊಸ ಆವೃತ್ತಿ ಬರುತ್ತಿದೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಕೆ.ವಿಜಯ್ ರಾಘವನ್, ‘ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕೊರೊನಾ ವೈರಸ್ ನಿಭಾಯಿಸುವುದು ಹೇಗೆ' ಎಂಬ ಕುರಿತು ನಿಮ್ಮ ಎಲ್ಲಾ ಪ್ರಶ್ನೆ ಹಅಗೂ ಅನುಮಾನಗಳಿಗೆ ಪರಿಹಾರ ಒದಗಿಸಲಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರಲು ವಿಜ್ಞಾನ ಮತ್ತು ತಂತ್ರಜ್ಞಾನವು ಪೂರ್ಣಪ್ರಮಾಣದಲ್ಲಿ ಸಹಾಯಕವಾಗಿದೆ ಎಂದು ಪ್ರೊ.ಕೆ.ವಿಜಯ್ ರಾಘವನ್ ಈ ಹಿಂದೆ ಹೇಳಿದ್ದರು. ಇದಕ್ಕಾಗಿ ವಿಜ್ಞಾನಿಗಳೊಂದಿಗೆ ಸಮಾಜದ ಜನರು ನಿಕಟ ಸಂಪರ್ಕ ಹೊಂದಿರಬೇಕು. ಶಿಕ್ಷಣ, ಮೂಲಭೂತ ಸಂಶೋಧನೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ, ಆರೋಗ್ಯ, ಪರಿಸರ ಮತ್ತು ಶಕ್ತಿ ಇತ್ಯಾದಿಗಳಲ್ಲಿ ಬಲವಾದ ಅಡಿಪಾಯವನ್ನು ನಿರ್ಮಿಸಲು ರಾಘವನ್ ಸಲಹೆ ನೀಡಿದ್ದಾರೆ.
ಸದ್ಯ ಕೊರೊನಾ ಸೋಂಕು ವ್ಯಾಪಿಸುತ್ತಿರುವ ನಿಟ್ಟಿನಲ್ಲಿ ಜನರಲ್ಲಿ ಸಾಕಷ್ಟು ಅನುಮಾನ, ಗೊಂದಲ ಹಾಗೂ ಭೀತಿ ಇರುವುದು ಸಹಜ. ಹೀಗಾಗಿ ನಿಮ್ಮೆಲ್ಲಾ ಅನುಮಾನಗಳ ಬಗೆಹರಿಕೆಗಾಗಿ ಮನೆಯಲ್ಲಿ ಕುಳಿತು ವಿಚಾರಗೋಷ್ಠಿಯಲ್ಲಿ ಭಾಗವಹಿಸಬಹುದು. ಅದೇ ವೆಬ್ನಾರ್.
ಇಂದು 5 ಗಂಟೆಗೆ ಪ್ರೊ.ಕೆ.ವಿಜಯ್ ರಾಘವನ್ ಅವರು , ‘ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕೊರೊನಾ ವೈರಸ್ ನಿಭಾಯಿಸುವುದು ಹೇಗೆ' ಎಂಬುದರ ಕುರಿತು ಆನ್ಲೈನ್ ವಿಚಾರಗೋಷ್ಠಿ ನಡೆಸಲಿದ್ದು, ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾದಗಿರುವುದು ಇಷ್ಟೇ. ಈ ಕೆಳಗಿನ ಲಿಂಕ್ ಓಪನ್ ಮಾಡಿ, ಇದರಲ್ಲಿ ನಿಮ್ಮ ಬಗೆಗಿನ ಮಾಹಿತಿ ಭರ್ತಿ ಮಾಡಿ ನೀವು ನೋಂದಣಿ ಮಾಡಿಕೊಳ್ಳಬಹುದು.
ಲಿಂಕ್ : https://zoom.us/webinar/register/WN_-umKIqDiTF6KuQgbakGAEg