ಲಖನೌ (ಉತ್ತರ ಪ್ರದೇಶ):ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಅರೆಬೆತ್ತಲೆಯಾಗಿ ಕೈ ಕೊಯ್ದುಕೊಂಡು ರಂಪಾಟ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಮದ್ಯ ಖರೀದಿಗೆ ಹಣ ನೀಡದ ಪತ್ನಿ: ಕೈ ಕೊಯ್ದುಕೊಂಡು ಪತಿಯ ರಂಪಾಟ! - ಉತ್ತರ ಪ್ರದೇಶದಲ್ಲಿ ವ್ಯಕ್ತಿಯ ಹೈಡ್ರಾಮ
ಮದ್ಯ ಖರೀದಿಗೆ 200 ರೂಪಾಯಿ ನೀಡಲು ಪತ್ನಿ ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಕೈ ಕೊಯ್ದುಕೊಂಡು ರಸ್ತೆಯಲ್ಲಿ ಹೈಡ್ರಾಮಾ ನಡೆಸಿದ್ದಾನೆ. ಅಲ್ಲದೆ ರಕ್ಷಣೆಗೆ ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.
ಕೈ ಕೊಯ್ದುಕೊಂಡು ಹೈಡ್ರಾಮ ನಡೆಸಿದ ವ್ಯಕ್ತಿ
ಮಡಿಯಾನ್ ಪ್ರದೇಶದ ಮನೋಜ್ ಎಂಬ ವ್ಯಕ್ತಿ ಮದ್ಯ ಖರೀದಿಸಲು 200 ರೂಪಾಯಿ ನೀಡುವಂತೆ ಪತ್ನಿಯನ್ನು ಕೇಳಿದ್ದಾನೆ. ಆದರೆ ಹಣ ನೀಡಲು ಪತ್ನಿ ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ, ನಡುರಸ್ತೆಯಲ್ಲೆ ಅರೆಬೆತ್ತಲೆ ಸ್ಥಿತಿಯಲ್ಲಿ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾನೆ.
ಸಾಕಷ್ಟು ರಕ್ತ ಸ್ರಾವದಿಂದ ಅಸ್ವಸ್ಥ ಸ್ಥಿತಿಯಲ್ಲಿದ್ದ ಆತನ ರಕ್ಷಣೆಗೆ ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.