ಕರ್ನಾಟಕ

karnataka

ETV Bharat / bharat

ಒಂದೆಡೆ ಉಪಚುನಾವಣೆ ಮತದಾನ, ಮತ್ತೊಂದೆಡೆ 7 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​! - ಕೇರಳ ಉಪಚುನಾವಣೆ 2019 ಸುದ್ದಿ

ಭಾರಿ ಮಳೆಗೆ ಮತ್ತೆ ದೇವರ ನಾಡು ತತ್ತರಿಸಿದೆ. ಒಂದೆಡೆ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಮತ್ತೊಂದೆಡೆ ರಾಜ್ಯದ 7 ಜಿಲ್ಲೆಗಳಲ್ಲಿ ಮಳೆಯಿಂದಾಗಿ ರೆಡ್​ ಅಲರ್ಟ್​ ಘೋಷಿಸಲಾಗಿದೆ.

7 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

By

Published : Oct 21, 2019, 4:59 PM IST

Updated : Oct 21, 2019, 6:22 PM IST

ತಿರುವನಂತಪುರಂ:ಕೇರಳದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ಮತದಾನ ನಡೆಯುತ್ತಿದ್ದು, ಈ ನಡುವೆಯೂ ರಾಜ್ಯದ 7 ಜಿಲ್ಲೆಗಳಲ್ಲಿ ಮಳೆಯಿಂದಾಗಿ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ದೇವರ ನಾಡಲ್ಲಿ ಮತ್ತೆ ವರುಣನಾಟ

ಮಳೆಯಿಂದಾಗಿ ರಾಜ್ಯದ ಹಲವು ರಾಜ್ಯಗಳು ತತ್ತರಿಸಿದ್ದು, ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರ ರೆಡ್​ ಅಲರ್ಟ್​ ಘೋಷಿಸಿದೆ. ರಾಜಧಾನಿ ತಿರುವನಂತಪುರಂ, ಎರ್ನಾಕುಲಂ, ಅಲೆಪ್ಪಿ, ತ್ರಿಶೂರ್​, ಕೊಟ್ಟಾಯಂ, ಇಡುಕ್ಕಿ ಹಾಗೂ ಪಲಕ್ಕಾಡ್​ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಮುಂಜಾಗೃತಾ ಕ್ರಮ ವಹಿಸಿಕೊಳ್ಳಲು ಜನತೆಗೆ ಸೂಚಿಸಲಾಗಿದೆ.

ಕೇರಳದ 7 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

ಎರ್ನಾಕುಲಂ ವಿಧಾನಸಭಾ ಕ್ಷೇತ್ರದ 10 ಮತಕೇಂದ್ರಗಳು ಮಳೆಯಿಂದ ತೊಂದರೆಗೊಳಗಾಗಿವೆ. ಹೀಗಾಗಿ ಮಳೆ ನಡುವೆಯೇ ಮತದಾರರು ಮತದಾನ ಮಾಡುವಂತಾಗಿದೆ. ಈ ಬಗ್ಗೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.​ ಸುಹಾಸ್​ ತಿಳಿಸಿದ್ದಾರೆ.

Last Updated : Oct 21, 2019, 6:22 PM IST

ABOUT THE AUTHOR

...view details