ಕರ್ನಾಟಕ

karnataka

ETV Bharat / bharat

ಖುಷಿ ಸುದ್ದಿ: ದೇಶದಲ್ಲಿ ಶೇ. 60 ರ ಸಮೀಪಕ್ಕೆ ತಲುಪಿದ ಕೋವಿಡ್​ ಚೇತರಿಕೆ ಪ್ರಮಾಣ - ಕೊರೊನಾ ಚೇತರಿಕೆ ಪ್ರಮಾಣ ಹೆಚ್ಚಳ

ಪ್ರಸ್ತುತ ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ 1,19,696 ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,15,125 ಇದ್ದರೆ, ಗುಣಮುಖರಾದವರ ಸಂಖ್ಯೆ 3,34,821 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Recovery rate of COVID-19 patients nearing 60 per cent
ಕೋವಿಡ್​ ಚೇತರಿಕೆ ಪ್ರಮಾಣ ಹೆಚ್ಚಳ

By

Published : Jul 1, 2020, 12:14 PM IST

ನವದೆಹಲಿ : ದೇಶದಲ್ಲಿ ಕೋವಿಡ್​ ರೋಗಿಗಳ ಚೇತರಿಕೆಯ ಪ್ರಮಾಣ ಶೇ. 60 ರ ಸಮೀಪದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಮತ್ತು ಕೇಂದ್ರೀಕೃತ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಸ್ತುತ ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ 1,19,696 ಹೆಚ್ಚಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 2,15,125 ಇದ್ದರೆ, ಗುಣಮುಖರಾದವರ ಸಂಖ್ಯೆ 3,34,821 ಇದೆ. ಮಂಗಳವಾರ 24 ಗಂಟೆಯ ಅವಧಿಯಲ್ಲಿ 13,099 ಜನರು ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಒಟ್ಟು ಚೇತರಿಕೆಯ ಪ್ರಮಾಣ ಶೇ. 59.07 ಇದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು, ದೇಶದಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್​ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, 1049 ಲ್ಯಾಬ್​ಗಳನ್ನು ಕೋವಿಡ್​ ಚಿಕಿತ್ಸೆಗೆ ಮೀಸಲಿಡಲಾಗಿದೆ. ಈ ಪೈಕಿ 761 ಸರ್ಕಾರಿ ಮತ್ತು 288 ಖಾಸಗಿ ಲ್ಯಾಬ್​ಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಐಸಿಎಂಆರ್ ಪ್ರಕಾರ, ಜೂನ್ 29 ರವರೆಗೆ ಒಟ್ಟು 86,08,654 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸೋಮವಾರ ಒಂದೇ ದಿನ 2,10,292 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ABOUT THE AUTHOR

...view details