ಕರ್ನಾಟಕ

karnataka

ETV Bharat / bharat

ಕೊರೊನಾ ವೈರಸ್​ನಿಂದ ಉದ್ಯೋಗಕ್ಕೂ ಬಿತ್ತು ಕತ್ತರಿ: 6.6 ಮಿಲಿಯನ್​ ನಿರುದ್ಯೋಗಿಗಳಿಗೆ ಯುಎಸ್‌ ನೆರವು - ಡೊನಾಲ್ಡ್​ ಟ್ರಂಪ್​

ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಕಳೆದ ಮೂರು ವಾರಗಳಲ್ಲಿ ಕೊರೊನಾ ಕಾರಣಕ್ಕೆ 10 ಉದ್ಯೋಗಿಗಳಲ್ಲಿ ಓರ್ವ ವ್ಯಕ್ತಿ ತನ್ನ ಉದ್ಯೋಗ ಕಳೆದುಕೊಳ್ತಿದ್ದಾನೆ. ಅಂತಹವರಿಗೆ ಅಮೆರಿಕ ಸರ್ಕಾರ ನೆರವು ನೀಡುತ್ತಿದೆ.

donald trump
ಡೊನಾಲ್ಡ್​ ಟ್ರಂಪ್​

By

Published : Apr 9, 2020, 7:44 PM IST

ವಾಷಿಂಗ್ಟನ್(ಅಮೆರಿಕ)​: ಕೊರೊನಾ ಮಹಾಮಾರಿಯ ಕಾರಣಕ್ಕೆ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದ್ದು, ಹಿಂದಿನ ವಾರ 6.6 ಮಿಲಿಯನ್​ ನಿರುದ್ಯೋಗಿಗಳಿಗೆ ಹಲವು ಯೋಜನಗೆಳ ಮೂಲಕ ನೆರವು ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ.

ಕಳೆದ ಮೂರು ವಾರಗಳಲ್ಲಿ ಕೊರೊನಾ ಕಾರಣಕ್ಕೆ 10 ಉದ್ಯೋಗಿಗಳಲ್ಲಿ ಒಬ್ಬ ಮಾತ್ರ ತನ್ನ ಉದ್ಯೋಗ ಕಳೆದುಕೊಂಡಿದ್ದು, ಅಂತಹ ವ್ಯಕ್ತಿಗಳಿಗೆ ಸಾಕಷ್ಟು ನೆರವು ನೀಡಲಾಗಿದೆ. ಇದು ಅಮೆರಿಕದಲ್ಲಿ 1948ರಲ್ಲಿ ಉಂಟಾದ ನಿರುದ್ಯೋಗ ಕಡಿತಕ್ಕೆ ಸರಿಸುಮಾರು ಸಮನಾಗಿದೆ.

ಕೊರೊನಾ ವೈರಸ್​ ಕಾರಣಕ್ಕೆ ಈ ತಿಂಗಳಲ್ಲಿ 20 ಮಿಲಿಯನ್​ಗೂ ಹೆಚ್ಚು​ ಅಮೆರಿನ್ನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ರಾಷ್ಟ್ರದ ಮೂರನೇ ಒಂದರಷ್ಟು ಆರ್ಥಿಕತೆಗೆ ಕೊರೊನಾ ವೈರಸ್​ ಹಾನಿ ಮಾಡಲಿದೆ ಎಂದು ಊಹಿಸಲಾಗಿದೆ. ಈಗಾಗಲೇ 48 ರಾಜ್ಯಗಳು ಅಗತ್ಯವಲ್ಲದ ಉದ್ಯಮಗಳ ವ್ಯಾಪ್ತಿಗೆ ಬರುವ ಉದ್ಯಮಗಳನ್ನು ಮುಚ್ಚಿವೆ. ರೆಸ್ಟೋರೆಂಟ್​ಗಳು, ಹೋಟೆಲ್​ಗಳು, ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿವೆ.

ಮೇ ತಿಂಗಳಲ್ಲಿ ಬಿಡುಗಡೆಯಾದ ಏಪ್ರಿಲ್​ನ ನಿರುದ್ಯೋಗ ವರದಿಯಲ್ಲಿ ಅಮೆರಿಕದಲ್ಲಿ ಶೇಕಡಾ 15ರಷ್ಟು ನಿರುದ್ಯೋಗವಿರುತ್ತು ಎಂದು ಉಲ್ಲೇಖಿಸಲಾಗಿದೆ. ಮುಂದಿನ ವರದಿಯಲ್ಲಿ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಯಿದೆ.

ABOUT THE AUTHOR

...view details