ಮುಂಬೈ: ಅತ್ತ ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ ಸೋಲು ಕಾಣುತ್ತಿದ್ದ ಹಾಗೇ ಇತ್ತ ಮುಂಬೈನ ಅಜ್ಞಾತ ಸ್ಥಳದಲ್ಲಿ ಅತೃಪ್ತ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ಧಾರೆ.
ಮಂಗಳವಾರ ಸರ್ಕಾರ ಪತನವಾಗುತ್ತಿದ್ದ ಹಾಗೇ ಅತೃಪ್ತರು ನಿಟ್ಟಿಸಿರು ಬಿಟ್ಟಿದ್ದರು. ಮಂಗಳವಾರ ಪುಣೆಯಲ್ಲಿದ್ದೇವೆ ಎಂದು ಹೇಳಿದ್ದ ಅತೃಪ್ತರು ಇಂದು ಮತ್ತೆ ಮುಂಬೈಯ ರಿನಾಯ್ಸನ್ಸ್ ಹೊಟೇಲ್ಗೆ ಆಗಮಿಸಿರುವುದಾಗಿ ಹೇಳಿದ್ದಾರೆ. ಆದರೆ, ವಾಸ್ತವ್ಯದ ನಿಗೂಢತೆಯನ್ನು ಮುಂದುವರಿಸಿದ್ದಾರೆ.
ಗುರುಶಿಷ್ಯರ ಹಠಮಾರಿತನ: ಅಂದು ವೀರೇಂದ್ರ ಪಾಟೀಲ್, ಇಂದು ಹೆಚ್ಡಿಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ...!
ಇಂದು ಅತೃಪ್ತರು ಸರಣಿಯೋಪಾದಿಯಲ್ಲಿ ಹೋಟೆಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಮುಂದೆ ಏನು ಮಾಡಬೇಕು. ವಾಪಸು ಹೋಗುವುದೋ ಅಥವಾ ಹೊಸ ಸರ್ಕಾರ ರಚನೆಯಾದ ಬಳಿಕ ಹೋಗುವುದೋ ಎಂಬ ಬಗ್ಗೆ ಅತೃಪ್ತರು ಸಭೆ ನಡೆಸುತ್ತಿದ್ದಾರೆ.
ಸದ್ಯ ಅತೃಪ್ತ ಶಾಸಕರಿಗೆ ಸ್ಪೀಕರ್ ಯಾವ ನಿರ್ಧಾರ ತಗೆದುಕೊಳ್ಳುತ್ತೋ ಅನ್ನೋ ಚಿಂತೆ ಶುರುವಾಗಿದೆ. ಒಂದು ವೇಳೆ ಅನರ್ಹತೆಗೊಳಿಸಿದರೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಸಂಬಂಧ ತಮ್ಮ ವಕೀಲರ ಜೊತೆ ಅತೃಪ್ತರು ನಿರಂತರ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಸ್ಪೀಕರ್ ಅನರ್ಹತೆಗೊಳಿಸಿದರೆ ಸುಪ್ರೀಂ ಮೊರೆ ಹೋಗುವ ಬಗ್ಗೆ ಅತೃಪ್ತರು ಚಿಂತನೆ ನಡೆಸುತ್ತಿದ್ದಾರೆ.
ಅತೃಪ್ತರ ರಾಜೀನಾಮೆ ಅಂಗೀಕಾರ ಆಗೋವರೆಗೂ ಬಿಎಸ್ವೈ ಪ್ರಮಾಣ ಸ್ವೀಕರಿಸಲ್ವಾ?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಯಾಗುವ ತನಕವೂ ಮುಂಬೈ ವಾಸ್ತವ್ಯ ಮುಂದುವರಿಸಲು ಅತೃಪ್ತರು ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ಬಿಎಸ್ ವೈ ವಿಶ್ವಾಸಮತಯಾಚನೆ ಬಳಿಕವಷ್ಟೇ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.