ನವದೆಹಲಿ: ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಭದ್ರತಾ ಪಡೆಗಳ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ನಂತರ ಸಮುದ್ರದಿಂದ ಹೊರಹೊಮ್ಮುವ ಭಯೋತ್ಪಾದನೆ ಸೋಲಿಸಲು ಪಡೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭಾರತೀಯ ನೌಕಾಪಡೆ ಶುಕ್ರವಾರ ತಿಳಿಸಿದೆ.
ಭಯೋತ್ಪಾದನೆಯ ಪ್ರತಿಯೊಂದು ಬೆದರಿಕೆ ಎದುರಿಸಲು, ಸಂಭವಿಸಬಹುದಾದ ಸಮಸ್ಯೆ ತಡೆಯಲು ನೌಕಾಪಡೆ ಸಿದ್ಧವಾಗಿದೆ ಎಂದು ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ (ವೈಸ್ ಆಡ್ರಿಮಲ್) ಎಂ.ಎಸ್. ಪವಾರ್ ತಿಳಿಸಿದ್ದಾರೆ.
ಸಮುದ್ರ ಪ್ರದೇಶದಿಂದ ಬರಬಹುದಾದಂತಹ ಭಯೋತ್ಪಾದನೆಯ ಪ್ರತಿಯೊಂದು ಬೆದರಿಕೆಯನ್ನು ಎದುರಿಸಲು ಭಾರತೀಯ ನೌಕಾಪಡೆ ಎಲ್ಲ ಪಾಲುದಾರರ ಸಹಕಾರದೊಂದಿಗೆ ಸಿದ್ಧವಾಗಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ ಎಂದು ಪವಾರ್ ವಿಶೇಷ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದರು.