ನವದೆಹಲಿ:ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅಪರಾಧಿಗಳಿಗೆ ನಾಳೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದೂಡಿಕೆಯಾಗಿದ್ದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಅತ್ಯಾಚಾರಿಗಳಿಗೆ ಗಲ್ಲು ಮುಂದೂಡಿಕೆ: ಇದು ದೇಶದ ವ್ಯವಸ್ಥೆಯ ವಿಫಲತೆ... ನಿರ್ಭಯಾ ತಾಯಿ ಕಣ್ಣೀರು - ನಿರ್ಭಯಾ ತಾಯಿ ಪ್ರತಿಕ್ರಿಯೆ
ತಾನೇ ನೀಡಿರುವ ಗಲ್ಲು ಶಿಕ್ಷೆ ಆದೇಶವನ್ನು ನ್ಯಾಯಾಲಯ ಯಾಕೆ ಹೀಗೆ ಪದೇ ಪದೇ ಮುಂದೂಡುತ್ತಿದೆ? ಇದು ನಮ್ಮ ದೇಶದ ವ್ಯವಸ್ಥೆಯ ವಿಫಲತೆಯನ್ನ ಎತ್ತಿ ತೋರಿಸುತ್ತಿದೆ ಎಂದು ಮಾಧ್ಯಮಗಳ ಮುಂದೆ ನಿರ್ಭಯಾ ತಾಯಿ ಆಶಾ ದೇವಿ ಕಣ್ಣೀರಿಟ್ಟಿದ್ದಾರೆ.
ತಾನೇ ನೀಡಿರುವ ಗಲ್ಲು ಶಿಕ್ಷೆ ಆದೇಶವನ್ನು ನ್ಯಾಯಾಲಯ ಯಾಕೆ ಹೀಗೆ ಪದೇ ಪದೇ ಮುಂದೂಡುತ್ತಿದೆ? ಇದು ನಮ್ಮ ದೇಶದ ವ್ಯವಸ್ಥೆಯ ವಿಫಲತೆಯನ್ನ ಎತ್ತಿ ತೋರಿಸುತ್ತಿದೆ. ನಮ್ಮ ವ್ಯವಸ್ಥೆ ಅಪರಾಧಿಗಳಿಗೇ ಬೆಂಬಲ ನೀಡುತ್ತಿದೆ ಎಂದು ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್, ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿಗಳು ತಿರಸ್ಕರಿಸುತ್ತಾರೆ, ಅತಿ ಶೀಘ್ರದಲ್ಲೇ ಮರಣ ದಂಡನೆ ದಿನಾಂಕವನ್ನ ಕೋರ್ಟ್ ನಿಗದಿಪಡಿಸಲಿದೆ ಎಂಬ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.