ಕರ್ನಾಟಕ

karnataka

ETV Bharat / bharat

ಪಾಪರ್‌ ಅನಿಲ್ ಅಂಬಾನಿ ಅದನ್ನ ಮಾಡದಿದ್ರೇ ಜೈಲೇ ಗತಿ..! - ನ್ಯಾಯಾಂಗ ನಿಂಧನೆ

ಅನಿಲ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ನ ನ್ಯಾಯಾಂಗ ನಿಂಧನೆ ಆದೇಶವನ್ನ ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

ಆರ್‌ಕಾಮ್‌ ಮಾಲೀಕ ಅನಿಲ್‌ ಅಂಬಾನಿ

By

Published : Feb 20, 2019, 3:09 PM IST

ನವದೆಹಲಿ: ಆರ್‌ಕಾಮ್‌ ಮಾಲೀಕ ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದೆ. ಅನಿಲ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ನ ನ್ಯಾಯಾಂಗ ನಿಂಧನೆ ಆದೇಶವನ್ನ ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಜತೆಗೆ ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ನ ಸಲ್ಲಿಸಿದ್ದ ಬೇಷರತ್‌ ಕ್ಷಮೆ ಅರ್ಜಿಯನ್ನೂ ಸುಪ್ರೀಂಕೋರ್ಟ್‌ ಸಾರಾಸಗಟಾಗಿ ತಿರಸ್ಕರಿಸಿದೆ.

ಮೂರು ರಿಲಾಯನ್ಸ್‌ ಕಂಪನಿಗಳೂ ಕೋರ್ಟ್‌ ಸೂಚನೆಗಳನ್ನ ಪಾಲಿಸುವ ಉದ್ದೇಶವಿಲ್ಲವೆಂದು ಕಾಣುತ್ತಿದೆ. ಹಾಗಾಗಿ ಅನಿಲ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಕಮ್ಯುನಿಕೇಷನ್ಸ್‌ ನ್ಯಾಯಾಂಗ ನಿಂಧನೆ ಅಪರಾಧದ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ ಸಲ್ಲಿಸಿದ್ದ ಬೇಷರತ್‌ ಕ್ಷಮೆ ಅರ್ಜಿಯನ್ನೂ ಕೋರ್ಟ್‌ ತಿರಸ್ಕರಿಸಿದೆ. ಅಷ್ಟೇ ಅಲ್ಲ, ಎರಿಕ್‌ಸನ್ಸ್‌ ಕಂಪನಿಗೆ ಒಂದು ವೇಳೆ ಈಗಾಗಲೇ 118 ಕೋಟಿ ರೂ. ಕಟ್ಟಿದ್ದರೇ, ಉಳಿದ 453 ಕೋಟಿ ರೂ. ಯನ್ನ ಪಾವತಿಸಬೇಕು ಅಂತ ಸುಪ್ರೀಂಕೋರ್ಟ್‌ ಆದೇಶಿಸಿದೆ.

ಆರ್‌ಕಾಮ್‌ ಮಾಲೀಕ ಅನಿಲ್‌ ಅಂಬಾನಿ

ಒಂದು ತಿಂಗಳ ಒಳಗೆ ಹಣವನ್ನ ಕಟ್ಟಬೇಕು. ಒಂದು ವೇಳೆ ನಿಗದಿತ ಸಮಯದೊಳಗೆ ಹಣ ಪಾವತಿ ಮಾಡಲು ಆಗದಿದ್ರೇ, ಅನಿಲ್‌ ಅಂಬಾನಿ 3 ತಿಂಗಳ ಜೈಲು ಅನುಭವಿಸಬೇಕು ಅಂತ ಕೋರ್ಟ್‌ ಎಚ್ಚರಿಸಿದೆ. ಇದನ್ನ ಹೊರತುಪಡಿಸಿದಂತೆ, ರಿಲಾಯನ್ಸ್‌ ಟೆಲಿಕಾಮ್‌ ಮತ್ತು ರಿಲಾಯನ್ಸ್‌ ಇನ್ಫ್ರಾಟೆಲ್‌ ಕಂಪನಿಗಳು ತಲಾ 1 ಕೋಟಿ ರೂ. ಯನ್ನ ಸುಪ್ರೀಂಕೋರ್ಟ್‌ ರಿಜಿಸ್ಟ್ರಿಗೆ ಕಟ್ಟಬೇಕು ಅಂತ ಕೋರ್ಟ್‌ ಆದೇಶಿಸಿದೆ.

ತಮಗೆ ಕಟ್ಟಬೇಕಿದ್ದ 550 ಕೋಟಿ ರೂ. ಬಾಕಿಯನ್ನ ಇನ್ನೂ ಪಾವತಿಸಿಲ್ಲ.ಬಾಕಿ ಪಾವತಿಸುವಂತೆ ಕೋರ್ಟ್ ನೀಡಿದ್ದ ಆದೇಶವನ್ನೂ ಪಾಲಿಸಿಲ್ಲ ಅಂತ ಎರಿಕ್‌ಸನ್ಸ್‌ ಕಂಪನಿ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂಧನೆ ಕೇಸ್‌ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಈಗ ಅನಿಲ್‌ ಅಂಬಾನಿಗೆ ಕೋರ್ಟ್‌ ಚಾಟಿ ಬೀಸಿದೆ.

ABOUT THE AUTHOR

...view details