ಆರ್‌ಸಿಇಪಿಗೆ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಭಾರತ ಸಹಿ ಹಾಕುವುದು ಈ ಪ್ರದೇಶದ ಮತ್ತು ಭಾರತದ ಆರ್ಥಿಕ ಹಿತಾಸಕ್ತಿಗೆ ಒಳ್ಳೆಯದು ಎಂದು ಆಸ್ಟ್ರೇಲಿಯಾದ ಮಾಜಿ ಉನ್ನತ ರಾಜತಾಂತ್ರಿಕ ಪೀಟರ್ ವರ್ಗೀಸ್ ಇಂದು ವಾದಿಸಿದರು. ಡಿಎಫ್‌ಎಟಿಯ ಮಾಜಿ ಕಾರ್ಯದರ್ಶಿ (ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ) ಮತ್ತು ಭಾರತದ ಮಾಜಿ ಹೈಕಮಿಷನರ್ ಆಗಿರುವ ವರ್ಗೀಸ್ ಅವರು ಆಸ್ಟ್ರೇಲಿಯಾ ಸರ್ಕಾರವು ನಿಯೋಜಿಸಿದ ಭಾರತ ಆರ್ಥಿಕ ಲೆಕ್ಕಾಚಾರ ಕಾಗದ ಪತ್ರವನ್ನು ಒಂದು ವರ್ಷದ ಹಿಂದೆ ಅನಾವರಣಗೊಳಿಸಿದ್ದರು. ಪತ್ರಿಕೆಯ ಶಿಫಾರಸುಗಳನ್ನು ಚರ್ಚಿಸಲು ಇಂದು ನವದೆಹಲಿಯಲ್ಲಿ ಸಿಐಐ ನೇತೃತ್ವದ ಸೆಮಿನಾರಿನಲ್ಲಿ ವರ್ಗೀಸ್ ಅವರು ಭಾರತವು ಮುಂದಿನ ದಿನಗಳಲ್ಲಿ ಆರ್‌ಸಿಇಪಿ ಸೇರಲಿದೆ ಎಂದು ಆಶಿಸಿದರು. "ನೀವು ಈ ಸಮಯದಲ್ಲಿ ಜಾಗತಿಕ ಆರ್ಥಿಕ ದೃಷ್ಟಿಕೋನ ಮತ್ತು ವ್ಯಾಪಾರ ಉದಾರೀಕರಣವು ಎದುರಿಸುತ್ತಿರುವ ಒತ್ತಡಗಳನ್ನು ನೀವು ಗಮನಿಸಿದರೆ ವ್ಯಾಪಾರದ ಉದಾರೀಕರಣದ ಸಮಯದಲ್ಲಿ ಜಾಗತಿಕ ಜಿಡಿಪಿಯ ಮೂರನೇ ಒಂದು ಭಾಗ ಮತ್ತು ಜಾಗತಿಕ ಜನ ಸಂಖ್ಯೆಯ ಮೂರನೇ ಒಂದು ಭಾಗವನ್ನು ಒಳಗೊಳ್ಳುವ ಒಪ್ಪಂದವನ್ನು ಮಾಡಿಕೊಳ್ಳುವುದು, ತೀವ್ರವಾಗಿ ಪರೀಕ್ಷೆಗೆ ಒಳಗಾಗುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಸ್ವಂತ ಆರ್ಥಿಕ ಆಕಾಂಕ್ಷೆಗಳು ಮತ್ತು ಹಿತಾಸಕ್ತಿಗಳ ದೃಷ್ಟಿಯಿಂದ, ಒಂದು ಹಂತದಲ್ಲಿ ಹೊರಗಿರುವುದಕ್ಕಿಂತ ಆರ್‌ಸಿಇಪಿ ಒಳಗಿರುವ ತೀರ್ಮಾನ ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಭವಿಷ್ಯದಲ್ಲಿ ಸ್ವಲ್ಪ ದಿನಗಳ ಅಂತರದಲ್ಲಿ ನಾವು ಆರ್‌ಸಿಇಪಿ ಒಳಗೆ ಭಾರತವನ್ನು ನೋಡಬಹುದು ಎಂದು ನಾವು ಭರವಸೆ ಹೊಂದಿದ್ದೇವೆ ”ಎಂದು ವರ್ಗೀಸ್ ಒತ್ತಿ ಹೇಳಿದರು.
ಹಲವಾರು ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಎಫ್‌ಟಿಎ (ಮುಕ್ತ ವ್ಯಾಪಾರ ಒಪ್ಪಂದಗಳು) ಮತ್ತು ಅದರ ವಿರುದ್ಧದ ವಾದಗಳ ಬಗ್ಗೆ ಕೇಳಿದಾಗ, ವ್ಯಾಪಾರ ಉದಾರೀಕರಣಗಳ ವಿಷಯದಲ್ಲಿ ಮಾತುಕತೆ ನಡೆಸುವಾಗ ಭಾರತ ಮತ್ತು ಆಸ್ಟ್ರೇಲಿಯಾ ವಿಭಿನ್ನ ಮಹತ್ವಾಕಾಂಕ್ಷೆಗಳನ್ನು ಹೊಂದಿವೆ. ಭಾರತವು ಈ ವಿಷಯದಲ್ಲಿ ಮಿಶ್ರ ಅನುಭವವನ್ನು ಹೊಂದಿದೆ ಮತ್ತು ಅದರ ಮಹತ್ವಾಕಾಂಕ್ಷೆಯ ಮಟ್ಟ ಎಫ್‌ಟಿಎ ಮಾತುಕತೆಗಳಲ್ಲಿ ಬಹಳ ಕಡಿಮೆಯಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಎಫ್‌ಟಿಎಗಳು ಆರ್ಥಿಕತೆಗೆ ಉಪಯುಕ್ತ ಸಾಧನ ಎಂದು ಈಗಾಗಲೇ ಕಂಡುಕೊಳ್ಳಲಾಗಿದೆ ಎಂದು ವರ್ಗೀಸ್ ಹೇಳಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) 10 ಸದಸ್ಯ ರಾಷ್ಟ್ರಗಳು ಮತ್ತು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಸಂವಾದ ಪಾಲುದಾರರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ನಂತರ ಬ್ಯಾಂಕಾಕ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಭಾರತವು ಪ್ರಸ್ತಾವಿತ ಆರ್‌ಸಿಇಪಿ ಒಪ್ಪಂದದಿಂದ ಹೊರಬಂದಿತು. "ಇಂದು, ನಾವು ಏಳು ವರ್ಷಗಳ ಆರ್‌ಸಿಇಪಿ ಮಾತುಕತೆಗಳನ್ನು ನೋಡಿದಾಗ, ಜಾಗತಿಕ ಆರ್ಥಿಕ ಮತ್ತು ವ್ಯಾಪಾರ ಸನ್ನಿವೇಶಗಳು ಸೇರಿದಂತೆ ಅನೇಕ ವಿಷಯಗಳು ಬದಲಾಗಿವೆ ಈ ಬದಲಾವಣೆಗಳನ್ನು ನಾವು ಕಡೆಗಣಿಸಲಾಗುವುದಿಲ್ಲ. ಆರ್‌ಸಿಇಪಿ ಒಪ್ಪಂದದ ಪ್ರಸ್ತುತ ರೂಪವು ಆರ್‌ಸಿಇಪಿಯ ಮೂಲ ಮನೋಭಾವ ಮತ್ತು ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಇದು ಭಾರತದ ಪ್ರಮುಖ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಸಹ ತೃಪ್ತಿಪಡಿಸುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ, ಭಾರತವು ಆರ್‌ಸಿಇಪಿ ಒಪ್ಪಂದಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿ ಥೈಲ್ಯಾಂಡ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು.
ಆರ್‌ಸಿಇಪಿ ತೊರೆಯುವುದರಿಂದ ಅಮೆರಿಕ ಮತ್ತು ಯುರೋಪಿ ಒಕ್ಕೂಟ ಜೊತೆ ಎಫ್‌ಟಿಎ ಕುರಿತು ನಡೆಯುತ್ತಿರುವ ಮಾತುಕತೆಗಳಲ್ಲಿ ಆ ದೇಶಗಳಿಗೆ ರಿಯಾಯಿತಿ ನೀಡುವುದು ಭಾರತಕ್ಕೆ ಕಷ್ಟವಾಗುತ್ತದೆಯೇ ಎಂದು ಕೇಳಿದಾಗ, ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಆರ್ಥಿಕ ವಿಭಾಗ ಮತ್ತು ರಾಜ್ಯಗಳು) ಪಿ ಹರೀಶ್, ಆರ್‌ಸಿಇಪಿಗೆ ಒಪ್ಪಿದ ಎಲ್ಲ 15 ಸದಸ್ಯ ದೇಶಗಳೊಂದಿಗೆ ಭಾರತವು ವ್ಯಾಪಾರ ಕೊರತೆಗಳನ್ನು ಹೊಂದಿದೆ. ಆದರೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಜೊತೆ ಹೆಚ್ಚುವರಿ ವ್ಯಾಪಾರ (ಟ್ರೇಡ್ ಸರ್ಪ್ಲಸ್) ಎಂದು ಅವರು ಹೇಳಿದರು.
ಇಂಡಿಯಾ ಎಕಾನಮಿ ಸ್ಟ್ರಾಟಜಿ ಪೇಪರ್ 2035ರ ವೇಳೆಗೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ವ್ಯಾಪಾರ, ವಾಣಿಜ್ಯ ಮತ್ತು ಹೂಡಿಕೆ ಸಹಭಾಗಿತ್ವವನ್ನು ಪರಿವರ್ತಿಸುವ ನೀಲ ನಕ್ಷೆಯಾಗಿದೆ. ವರ್ಗೀಸ್ ತನ್ನ ದೇಶದಿಂದ ವಿಭಿನ್ನ ರಫ್ತು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತಂದು ಹಾಕಲು ಆಸ್ಟ್ರೇಲಿಯಾ ಪರವಾಗಿ ಬ್ಯಾಟಿಂಗ್ ಮಾಡಿದರು. ಏತನ್ಮಧ್ಯೆ, ಪುನಾರವರ್ತಿತ ಮತ್ತು ರಚನಾತ್ಮಕ ಆರ್ಥಿಕ ಕುಸಿತ ಕಂಡುಬಂದಿರುವುದರಿಂದ ಭಾರತೀಯ ಸರ್ಕಾರವು ರಿಯಲ್ ಎಸ್ಟೇಟ್ನಿಂದ ವಾಹನಗಳ ತನಕ ಪ್ರತಿ ವಲಯದ ಕಳವಳಗಳನ್ನು ಸರಿಪಡಿಸಲು ಇತ್ತೀಚೆಗೆ ಕೆಲಸ ಮಾಡುತ್ತಿದೆ ಎಂದು ಹರೀಶ್ ಭರವಸೆ ನೀಡಿದರು. ಪ್ರವಾಸೋದ್ಯಮ ಮತ್ತು ವ್ಯವಹಾರವನ್ನು ಹೆಚ್ಚಿಸಲು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನೇರ ವಾಯು ಸಂಪರ್ಕವನ್ನು ಹೊಂದುವ ಅಗತ್ಯವನ್ನು ಪ್ಯಾನಲಿಸ್ಟ್ಗಳು ಒತ್ತಿ ಹೇಳಿದ್ದಾರೆ. ದ್ವಿಪಕ್ಷೀಯ ಆರ್ಥಿಕ ಸಂಬಂಧವನ್ನು ಹೆಚ್ಚಿಸಲು ಇಂಧನ, ನವೀಕರಿಸಬಹುದಾದ ಇಂಧನಗಳು, ಫಿನ್‌ಟೆಕ್, ಆನಿಮೇಷನ್ ಗೇಮಿಂಗ್, ಬ್ಯಾಂಕಿಂಗ್ ಪರಿಹಾರಗಳು, ವೈದ್ಯಕೀಯ ತಂತ್ರಜ್ಞಾನ, ರತ್ನಗಳು ಮತ್ತು ಆಭರಣಗಳನ್ನು ಪ್ರಮುಖ ಕ್ಷೇತ್ರಗಳೆಂದು ಗುರುತಿಸಲಾಗಿದೆ.
ಹಿರಿಯ ಪತ್ರಕರ್ತೆಸ್ಮಿತಾಶರ್ಮಾಅವರುಆಸ್ಟ್ರೇಲಿಯಾದಮಾಜಿವಿದೇಶಾಂಗಕಾರ್ಯದರ್ಶಿಪೀಟರ್ವರ್ಗೀಸ್ಅವರೊಂದಿಗೆಆರ್‌ಸಿಇಪಿಯಿಂದಹೊರಗುಳಿಯುವನಿರ್ಧಾರದಬಗ್ಗೆಮಾತನಾಡಿದರು.ಆವಿಶೇಷಸಂದರ್ಶನ ಇಲ್ಲಿದೆ.
ಪ್ರ. ಭಾರತದ ಎಕಾನಮಿ ಸ್ಟ್ರಾಟಜಿ ವರದಿಯಲ್ಲಿ ಯಾವ ಮಹತ್ವದ ಪ್ರಗತಿ ಸಾಧಿಸಲಾಗಿದೆ?
ಸರ್ಕಾರವು ಶಿಫಾರಸುಗಳಿಗೆ ಉದ್ದೇಶಪೂರ್ವಕ ಮತ್ತು ಕ್ರಮಬದ್ಧವಾದ ಮಾರ್ಗವನ್ನು ತೆಗೆದುಕೊಂಡಿದೆ. ಈಗ ನಾವು ಅವುಗಳ ಅನುಷ್ಠಾನಗಳಲ್ಲಿ ಪ್ರಗತಿ ಸಾಧಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಒಂದು ಪ್ರಕ್ರಿಯಾ (ಮೆಕಾನಿಸಮ್) ವ್ಯವಸ್ಥೆಯನ್ನು ಹೊಂದಿದ್ದೇವೆ.
ಪ್ರ. ಭಾರತವು ಆರ್‌ಸಿಇಪಿಯಿಂದ ಹೊರಗುಳಿಯುವುದರೊಂದಿಗೆ ಜಗತ್ತಿಗೆ ನೀಡಿದ ಸಂದೇಶವೇನು?