ಕರ್ನಾಟಕ

karnataka

ETV Bharat / bharat

ರೆಪೋ ದರದಲ್ಲಿಲ್ಲ ಯಾವುದೇ ಬದಲಾವಣೆ... ಆರ್​ಬಿಐ ಮಹತ್ವದ ನಿರ್ಧಾರ - Reserve Bank of India

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ. 8 ಪೈಸೆ ಕುಸಿಯುವುದರೊಂದಿಗೆ ಡಾಲರ್​ ವಿರುದ್ಧ 71.61 ರಲ್ಲಿ ವಹಿವಾಟು ನಡೆಸುತ್ತಿದೆ.

RBI Governor Shaktikanta Das, ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ
ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ

By

Published : Dec 5, 2019, 12:55 PM IST

ನವದೆಹಲಿ: ಆರ್​​ಬಿಐ ರೆಪೋ ರೇಟ್​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನ 5.15ರ ದರವನ್ನೇ ಮುಂದುವರಿಸಿದೆ. ಮೂರು ದಿನಗಳ ಮಹತ್ವದ ಸಭೆ ಬಳಿಕ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ ಸುದ್ದಿಗೋಷ್ಠಿ ನಡೆಸಿದರು. ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಿಸಿದರು.

ಭಾರತೀಯ ಕೇಂದ್ರ ಬ್ಯಾಂಕ್​ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ. 8 ಪೈಸೆ ಕುಸಿಯುವುದರೊಂದಿಗೆ ಡಾಲರ್​ ವಿರುದ್ಧ 71.61 ರಲ್ಲಿ ವಹಿವಾಟು ನಡೆಸುತ್ತಿದೆ.

ಇನ್ನು ರಿಸರ್ವ್​ ರೆಪೋ ದರದಲ್ಲೂ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧರಿಸಿದೆ. ಈ ಹಿಂದಿನಂತೆ ಅದು ಶೇ 4.90 ರಲ್ಲೇ ಮುಂದುವರೆಯಲಿದೆ. ಹಣಕಾಸು ಹಿಂಜರಿತದ ಹಿನ್ನೆಲೆಯಲ್ಲಿ ಆರ್ಥಿಕ ನೀತಿಗಳ ಸಮಿತಿಯ ಮಹತ್ವದ ಮೂರು ದಿನಗಳ ಸಭೆ, ಸದ್ಯದ ಪರಿಸ್ಥಿತಿ ನಿಭಾಯಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.

ABOUT THE AUTHOR

...view details