ನವದೆಹಲಿ:ಮದ್ಯದ ದೊರೆ ವಿಜಯ್ ಮಲ್ಯ ಮಾಡಿದ ವಂಚನೆಯನ್ನು ತಡವಾಗಿ ವರದಿ ಮಾಡಿದ ಕಾರಣಕ್ಕೆ ಪಿಎನ್ಬಿ ಬ್ಯಾಂಕ್ ಮೇಲೆ ಆರ್ಬಿಐ 50 ಲಕ್ಷ ದಂಡ ವಿಧಿಸಿದೆ.
ಮಲ್ಯ ವಂಚನೆ ಬಗ್ಗೆ ತಡವಾಗಿ ವರದಿ.. ಪಿಎನ್ಬಿಗೆ 50 ಲಕ್ಷ ದಂಡ ವಿಧಿಸಿದ ಆರ್ಬಿಐ! - ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್
ಮಲ್ಯ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ನಿಂದ ಉಂಟಾದ ವಂಚನೆ ಬಗ್ಗೆ ತಡವಾಗಿ ವರದಿ ಮಾಡಿದ್ದಕ್ಕೆ ಆರ್ಬಿಐ ತನಗೆ 50 ಲಕ್ಷ ದಂಡ ವಿಧಿಸಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿಕೊಂಡಿದೆ.
![ಮಲ್ಯ ವಂಚನೆ ಬಗ್ಗೆ ತಡವಾಗಿ ವರದಿ.. ಪಿಎನ್ಬಿಗೆ 50 ಲಕ್ಷ ದಂಡ ವಿಧಿಸಿದ ಆರ್ಬಿಐ!](https://etvbharatimages.akamaized.net/etvbharat/prod-images/768-512-4030209-thumbnail-3x2-gggg.jpg)
RBI-PNB
ಮಲ್ಯ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ನಿಂದ ಉಂಟಾದ ವಂಚನೆ ಬಗ್ಗೆ ತಡವಾಗಿ ವರದಿ ಮಾಡಿದ್ದಕ್ಕೆ ಆರ್ಬಿಐ ತನಗೆ 50 ಲಕ್ಷ ದಂಡ ವಿಧಿಸಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿಕೊಂಡಿದೆ.2018 ಜುಲೈ 10ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಲ್ಲಿಕೆ ಮಾಡಿದ್ದ ಫ್ರಾಡ್ ಮಾನಟರಿಂಗ್ ರಿಪೋರ್ಟ್-1ನ್ನು ಆರ್ಬಿಐ ಗಮನಿಸಿದೆ. ತಡವಾಗಿ ವರದಿ ಮಾಡಿದ ಕಾರಣಕ್ಕೆ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್, 1949 ಪ್ರಕಾರ 50 ಲಕ್ಷ ಮೊತ್ತದ ದಂಡ ವಿಧಿಸಿದೆ ಎಂದು ಹೇಳಲಾಗಿದೆ.
ಇಂತಹುದೇ ಕಾರಣಕ್ಕೆ ತನಗೂ ಆರ್ಬಿಐ 50 ಲಕ್ಷ ದಂಡ ವಿಧಿಸಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.