ಕಠ್ಮಂಡು (ನೇಪಾಳ): ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW)ನ ಮುಖ್ಯಸ್ಥ ಶಮಂತ್ ಕುಮಾರ್ ಗೋಯೆಲ್ ಅಕ್ಟೋಬರ್ 14ರ ಬುಧವಾರ ಸಂಜೆ ತಮ್ಮ ಜೊತೆ ಸಭೆ ನಡೆಸಿದ್ದಾರೆ ಎಂದು ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಸ್ಪಷ್ಟನೆ ನೀಡಿದ್ದಾರೆ.
ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದರೂ, ನೇಪಾಳ ಪ್ರಧಾನಮಂತ್ರಿ ಕಚೇರಿ ಈ ವಿಚಾರವನ್ನು ತಳ್ಳಿ ಹಾಕಿದ್ದು, ರಾ ಸಂಸ್ಥೆ ಮುಖ್ಯಸ್ಥನೊಂದಿಗೆ ಸಭೆ ನಡೆಸಿರುವುದಾಗಿ ಒಪ್ಪಿಕೊಂಡಿದೆ. ಪ್ರಧಾನಿ ಕಚೇರಿ ಮಾತ್ರವಲ್ಲದೇ ಮಾಜಿ ಪ್ರಧಾನಿ ಪುಷ್ಪಕಮಲ್ ದಹಾಲ್ ಹಾಗೂ ಮಾಜಿ ಉಪ ಪ್ರಧಾನಿಯಾದ ಮಾಧವ್ ಕಮಾರ್ ನೇಪಾಳ್ ಕೂಡಾ ಈ ವಿಚಾರವನ್ನು ತಿರಸ್ಕರಿಸಿದ್ದರು.
ಬುಧವಾರ ರಾ ಮುಖ್ಯಸ್ಥ ಕಠ್ಮಂಡುವಿಗೆ ಭೇಟಿ ನೀಡಿದ್ದರು. ಈ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು. ಈಗ ವಿಚಾರ ಬಹಿರಂಗವಾಗಿದ್ದು, ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಚರ್ಚೆ ನಡೆಸಲಾಗಿದೆ ಎಂದು ಓಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.