ನವದೆಹಲಿ:ಕೊರೊನಾ ಉಂಟುಮಾಡಿದ ಅಂಧಕಾರ ಹೊಡೆದೋಡಿಸಲು ಏಪ್ರಿಲ್ 5ರ ಭಾನುವಾರ ರಾತ್ರಿ 9ಗಂಟೆಗೆ ಎಲ್ಲರೂ 9 ನಿಮಿಷಗಳ ಕಾಲ ಮೊಂಬತ್ತಿ ಬೆಳಗಿಸುವಂತೆ ಪ್ರಧಾನಿ ನಮೋ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಇದೀಗ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
130 ಕೋಟಿ ಜನರು ಮೊಂಬತ್ತಿ ಬೆಳಗುವ ಮೂಲಕ ಕೋವಿಡ್-19 ವಿರುದ್ಧ ಸಂಘಟಿತವಾಗಿ ಹೋರಾಡೋಣ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಪ್ರತಿಯೊಬ್ಬರು ಮನೆಯಲ್ಲಿದ್ದು, ದೇಶದ ಪ್ರಧಾನಿ ಮಾತು ನಡೆಸಿಕೊಡಬೇಕು. ಇಂತಹ ಶ್ರೇಷ್ಠ ನಾಯಕ ಇರುವುದಕ್ಕೆ ನಾವು ಹೆಮ್ಮೆ ಪಡೋಣ. ಮನೆಯಲ್ಲಿ ಸೇಫ್ ಆಗಿದ್ದು ಭಾನುವಾರ ರಾತ್ರಿ 9ಗಂಟೆಗೆ ವಿದ್ಯುದ್ದೀಪ ಆಫ್ ಮಾಡಿ ಮೊಂಬತ್ತಿ, ಟಾರ್ಚ್, ಮೊಬೈಲ್ ಪ್ಲ್ಯಾಶ್ ಹಚ್ಚೋಣ ಎಂದು ಭಜ್ಜಿ ಹೇಳಿದ್ದಾರೆ.