ಮುಂಬೈ:ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಆಯ್ಕೆಯಾಗಿದ್ದು, ಇದಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟ್ನ ಕೋಚ್ ರವಿಶಾಸ್ತ್ರಿ ಮಾತನಾಡಿದ್ದು, ಇದು ಭಾರತೀಯ ಕ್ರಿಕೆಟರ್ಸ್ಗೆ ಸಿಕ್ಕಿರುವ ಅತಿದೊಡ್ಡ ಗೆಲುವು ಎಂದು ಹೇಳಿಕೊಂಡಿದ್ದಾರೆ.
ಗಂಗೂಲಿ ನೇಮಕವಾಗಿರುವುದು ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ನೇರ ಸ್ವಭಾವದ ಇವರ ಆಡಳಿತ ನಿಜಕ್ಕೂ ಎಲ್ಲರಿಗೂ ಮೆಚ್ಚುಗೆಯಾಗಲಿದ್ದು, ಭಾರತೀಯ ಕ್ರಿಕೆಟರ್ಸ್ಗೆ ಉಜ್ವಲ ಭವಿಷ್ಯ ಸಿಗಲಿದೆ ಎಂದರು. ಈಗಾಗಲೇ ಕೋಲ್ಕತ್ತಾ ಕ್ರಿಕೆಟ್ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವ ಅವರು, ಹಾಗೂ ಓರ್ವ ಕ್ರಿಕೆಟರ್ ಆಗಿ ಅನುಭವ ಹೊಂದಿರುವುದಕ್ಕಾಗಿ ಕೆಲಸ ಮಾಡುವುದು ಸುಲಭವಾಗಲಿದೆ ಎಂದಿದ್ದಾರೆ.