ನವದೆಹಲಿ: ಮಹತ್ವದ ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್ ಕುಮಾರ್ ಅವರನ್ನು ಫಿನ್ಲೆಂಡ್‌ಗೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
1995 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದ ರವೀಶ್ ಕುಮಾರ್ ಜುಲೈ 2017 ರಿಂದ 2020ರ ಏಪ್ರಿಲ್ವರೆಗೆ ಎಂಇಎ ವಕ್ತಾರರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಬಾಲಕೋಟ್ ದಾಳಿ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಡಳಿತ ಪ್ರದೇಶ ಘೋಷಣೆ ಹಲವಾರು ಸೂಕ್ಷ್ಮ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಚತುರತೆಯಿಂದ ನಿಭಾಯಿಸಿದ್ದರು.
ರವೀಶ್ ಕುಮಾರ್ ಎಂಇಎ ವಕ್ತಾರರಾಗುವ ಮೊದಲು ಫ್ರಾಂಕ್‌ಫರ್ಟ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ವೃತ್ತಿಜೀವನವನ್ನು ಜಕಾರ್ತಾದ ಇಂಡಿಯನ್ ಮಿಷನ್‌ನಲ್ಲಿ ಪ್ರಾರಂಭಿಸಿದ್ದ ಅವರು, ನಂತರ ಥಿಂಪು ಮತ್ತು ಲಂಡನ್‌ನಲ್ಲಿ ಸಹ ಸೇವೆ ಸಲ್ಲಿಸಿದ್ದರು. ಆದಷ್ಟು ಬೇಗ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಎಂಇಎ ತಿಳಿಸಿದೆ.