ಕೋಲ್ಕತ್ತಾ:ವಿದ್ಯಾರ್ಥಿಗಳ ಅಭಿವೃದ್ಧಿ ಗುರಿಯಾಗಿಸಿಕೊಂಡು ಶ್ರಮಿಸಿದ ಇಬ್ಬರು ಶಿಕ್ಷಕರಾದ ಮಿಶಾ ಘೋಶಾಲ್ ಹಾಗೂ ಡಾ. ಕಲಿಮುಲ್ ಹಕ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಇಬ್ಬರು ಮಾದರಿ ಶಿಕ್ಷಕರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪುರಸ್ಕಾರ್ - President's Puraskar Award
ಪಶ್ಚಿಮ ಬಂಗಾಳದ ಇಬ್ಬರು ಮಾದರಿ ಶಿಕ್ಷಕರಾದ ಮಿಶಾ ಘೋಶಾಲ್ ಹಾಗೂ ಡಾ. ಕಲಿಮುಲ್ ಹಕ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಟೊಟೊ ಬುಡಕಟ್ಟು ಸಮುದಾಯಕ್ಕೆ ನೀಡಿದ ಕೊಡುಗೆಗಾಗಿ ಮಿಶಾ ಘೋಶಾಲ್ ಅವರಿಗೆ ಈ ವರ್ಷ ರಾಷ್ಟ್ರಪತಿ ಪುರಸ್ಕಾರ್ ನೀಡಲಾಗುತ್ತಿದೆ. ಮಿಶಾ ಜಲ್ಪೈಗುರಿ ಜಿಲ್ಲೆಯ ಟೊಟೊ ಸ್ಮಾರಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ. ಟೊಟೊ ಸಮುದಾಯವು ವಿಶ್ವದ ಅತ್ಯಂತ ಚಿಕ್ಕ ಸಮುದಾಯವಾಗಿದ್ದು, ಮಿಶಾ ಬೋಧನೆಗೆ ಸಹಾಯವಾಗಲೆಂದು ಟೊಟೊ ಭಾಷೆಯನ್ನು ಕಲಿತಿದ್ದಾರೆ.
ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರದ ನೇಪಾಳಿಪಾರ ಹಿಂದಿ ಪ್ರೌಢ ಶಾಲೆಯ ಮತ್ತೊಬ್ಬ ಶಿಕ್ಷಕ ಡಾ. ಕಲಿಮುಲ್ ಹಕ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪುರಸ್ಕಾರ್ ಸಂದಿದೆ. ಅವರು ನೇಪಾಳಿಪಾರ ಪ್ರೌಢ ಶಾಲೆಯನ್ನು ನವೀಕರಿಸಿದ್ಧಾರೆ ಎಂದು ತಿಳಿದು ಬಂದಿದೆ.