ಕರ್ನಾಟಕ

karnataka

ETV Bharat / bharat

ಈ ಜನಪ್ರಿಯ ರಾಪರ್ ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುತ್ತಾನಂತೆ! - ಫೇಮಸ್​ ರಾಪರ್

ತಾನು ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿ ಜನಪ್ರಿಯ ಅಮೆರಿಕನ್​ ರಾಪರ್ ಕ್ಲಿಫರ್ಡ್‌ ಜೋಸೆಫ್ ಹ್ಯಾರಿಸ್‌ ಜ್ಯೂ(ಟಿಐ) ​ ಕುತೂಹಲಕಾರಿ ಹೇಳಿಕೆ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಫೇಮಸ್​ ರಾಪರ್​ ಹಾಗೂ ನಟ ಐಟಿ

By

Published : Nov 7, 2019, 6:49 PM IST

Updated : Nov 7, 2019, 6:57 PM IST

ನ್ಯೂಯಾರ್ಕ್​​:ಅಮೆರಿಕದ ಫೇಮಸ್​ ರಾಪರ್​ ಹಾಗೂ ನಟ ಕ್ಲಿಫರ್ಡ್‌ ಜೋಸೆಫ್ ಹ್ಯಾರಿಸ್‌ ಜ್ಯೂ(ಟಿಐ) ​ಕಳೆದ ಕೆಲ ದಿನಗಳ ಹಿಂದೆ ಟಿವಿ ಚಾನಲ್​ಗೆ ನೀಡಿದ ಸಂದರ್ಶನದ ವೇಳೆ ಹೇಳಿರುವ ಸಂಗತಿ ಇದೀಗ ವಿವಾದಕ್ಕೆ ಕಾರಣವಾಗಿದೆ.

ಲೇಡಿಸ್​ ಲೈಕ್​ ಅಸ್​ಗೆ ನೀಡಿದ ಸಂದರ್ಶನದಲ್ಲಿ ಟಿಐಗೆ​​, ನಿಮ್ಮ ಮಗಳೊಂದಿಗೆ ಲೈಂಗಿಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ತಮಗೆ 18 ವರ್ಷದ ದೇಜಿ ಹ್ಯಾರಿಸ್ ಎಂಬ ಹೆಸರಿನ ಮಗಳಿದ್ದು, ಆಕೆ ಇದೀಗ ಕಾಲೇಜ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದಿದ್ದಾರೆ. ಆದ್ರೆ ಇಷ್ಟೇ ಆಗಿದ್ದಿದ್ದರೆ ವಿವಾದ ಯಾಕೆ ಆಗುತ್ತಿತ್ತು ಹೇಳಿ?

ರಾಪರ್ ಟಿಐ​ ಹಾಗೂ ಆತನ ಮಗಳು

ತಾನು ಮಗಳೊಂದಿಗೆ ಲೈಂಗಿಕತೆ ಬಗ್ಗೆ ಮನಬಿಚ್ಚಿ ಮಾತನಾಡುವುದಾಗಿ ಹೇಳಿರುವ ಟಿಐ, ಪ್ರತಿವರ್ಷ ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿಯೂ ಹೇಳಿದ್ರು. ಅದಕ್ಕಾಗಿ ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ಯುತ್ತೇನೆೆ. ಈ ಸಂದರ್ಭದಲ್ಲಿ ಮಗಳಿಗೆ ವೈದ್ಯರು ಲೈಂಗಿಕ ವಿಷಯದ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಎಂದು ಹೇಳಿದ್ದಾರೆ.

ಟಿಐ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟನ ವಿರುದ್ಧ ಟ್ವಿಟ್ಟರ್‌​​ನಲ್ಲಿ ಟೀಕೆಗಳ ಮಳೆಯಾಗುತ್ತಿದೆ.

Last Updated : Nov 7, 2019, 6:57 PM IST

ABOUT THE AUTHOR

...view details