ಕರ್ನಾಟಕ

karnataka

ETV Bharat / bharat

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಯತ್ನ: ಅತ್ಯಾಚಾರ ಆರೋಪಿಗೆ ಗುಂಡು - ಅತ್ಯಾಚಾರ ಅರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಅತ್ಯಾಚಾರ ಆರೋಪಿಯನ್ನು ಸ್ಥಳ ಪರಿಶೀಲನೆಗೆಂದು ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.

Rape accused injured in encounter with police
ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ

By

Published : Oct 22, 2020, 10:08 AM IST

ಗ್ರೇಟರ್ ನೋಯ್ಡಾ(ಉತ್ತರ ಪ್ರದೇಶ): ಗ್ರೇಟರ್ ನೋಯ್ಡಾದ ಸೂರಜ್‌ಪುರ ಪ್ರದೇಶದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಅತ್ಯಾಚಾರ ಆರೋಪಿ ಗಾಯಗೊಂಡಿದ್ದಾನೆ.

ಸೋನು ಎಂಬ ಆರೋಪಿಯನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

"ಅತ್ಯಾಚಾರ ಆರೋಪದ ಮೇಲೆ ಹಿಂದಿನ ದಿನವಷ್ಟೇ ಆತನನ್ನು ಬಂಧಿಸಲಾಗಿತ್ತು. ಸ್ಥಳ ಪರಿಶೀಲನೆಗೆಂದು ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ವೇಳೆ ನಡೆಸಿದ ಗುಂಡಿನ ದಾಳಿ ನಡೆಸಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಂಕುರ್ ಅಗರ್ವಾಲ್ ತಿಳಿಸಿದರು.

For All Latest Updates

ABOUT THE AUTHOR

...view details