ಕರ್ನಾಟಕ

karnataka

ETV Bharat / bharat

ಜೈಲಿನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ: 11 ದಿನಗಳ ಬಳಿಕ ಬಂಧನ - Rape accused caught 11 days after,

ಅತ್ಯಾಚಾರ ಆರೋಪಿಯೊಬ್ಬ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಜೈಲಿನಿಂದ ಪರಾರಿಯಾಗಿದ್ದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿತ್ತು. ಹನ್ನೊಂದು ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Rape accused caught, Rape accused caught 11 days after, Rape accused caught 11 days after escape from Kullu jail, ಅತ್ಯಾಚಾರ ಆರೋಪಿ ಸೆರೆ, ಜೈಲಿನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ಸೆರೆ, ಕುಲ್ಲು ಜೈಲಿನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ಸೆರೆ,
ಆರೋಪಿ ಚಿತ್ರ

By

Published : Jan 27, 2020, 2:39 PM IST

ಶಿಮ್ಲಾ:ಜೈಲಿನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿಯನ್ನು ಶಿಮ್ಲಾ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಹನ್ನೊಂದು ದಿನಗಳ ಕೆಳಗೆ ಅಂದ್ರೆ ಜ. 15ರಂದು ಕುಲ್ಲು ಜೈಲಿನಿಂದ ತಿಕ್ರಾ ಬೌಡಿ ಗ್ರಾಮದ ನಿವಾಸಿ ಖೇಮ್​ ರಾಜ್ ಎಂಬಾತ​ ಪರಾರಿಯಾಗಿದ್ದ. ಹತ್ತು ದಿನ ಕಳೆದರೂ ಆರೋಪಿಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಹನ್ನೊಂದನೇ ದಿನ ಆರೋಪಿ ರಾಜ್​ ಸುಳಿವು ಪತ್ತೆಯಾಗಿದೆ.

ಪಿರ್ಡಿ ಬಳಿಯ ಬಿಯಾಸ್​ ನದಿ ಬಳಿ ಆರೋಪಿ ವಾಸಿಸುತ್ತಿದ್ದ. ಹತ್ತು ದಿನಗಳ ಕಾಲ ಬರೀ ಬಿಸ್ಕೇಟ್​ ಮತ್ತು ನೀರು ಸೇವಿಸುತ್ತಿದ್ದ ಅತ್ಯಾಚಾರ ಆರೋಪಿ ರಾಜ್,​ ಭುಹಂತರ್​ನಲ್ಲಿ ವಾಸಿಸುತ್ತಿದ್ದ ತನ್ನ ಗೆಳೆಯನ ಬರುವಿಕೆಗೆ ಕಾಯುತ್ತಿದ್ದನಂತೆ. ಈ ಸಮಯ ಉಪಯೋಗಿಸಿಕೊಂಡ ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.

ABOUT THE AUTHOR

...view details