ಮುಂಬೈ:ದ್ವಿಚಕ್ರ ವಾಹನ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರಿನ ಮಧ್ಯೆ ಸಣ್ಣ ಪ್ರಮಾಣದ ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಘಟನೆ ನಡೆದಿದೆ. ಬೈಕ್ ಹಿಂದಿನಿಂದ ಬಂದು ಕಾರಿಗೆ ತಾಕಿದ್ದು, ರಣವೀರ್ ಈ ವೇಳೆ ಕಾರಿನಿಂದಿಳಿದು ಕೆಲ ನಿಮಿಷ ಪರಿಶೀಲನೆ ನಡೆಸಿ ನಂತರ ಸ್ಥಳದಿಂದ ತೆರಳಿದ್ದಾರೆ.
ಸದ್ಯಕ್ಕೆ ರಣವೀರ್ ಸಿಂಗ್ ಕಬೀರ್ ಖಾನ್ ನಿರ್ದೇಶನದ ಕ್ರೀಡಾ ಬಯೋಪಿಕ್ '83'ರಲ್ಲಿ ತೊಡಗಿಸಿಕೊಂಡಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ಗೆ ಪತ್ನಿಯಾಗಿ ನಟಿ ದೀಪಿಕಾ ಕಾಣಿಸಿಕೊಳ್ಳಲಿದ್ದು, ಕಪಿಲ್ ಪತ್ನಿ ರೋಮಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.