ಕರ್ನಾಟಕ

karnataka

ETV Bharat / bharat

ಕರ್ನಾಟಕ-ಮುಂಬೈ ಪಂದ್ಯದ ವೇಳೆ ಮೈದಾನದಲ್ಲಿ ಅಪರೂಪದ ಅತಿಥಿ... ದಿಗಿಲುಗೊಂಡ ಪ್ಲೇಯರ್ಸ್​! - ಮೈದಾನದಲ್ಲಿ ಕಾಣಿಸಿಕೊಂಡ ಹಾವು

ಕರ್ನಾಟಕ-ಮುಂಬೈ ತಂಡಗಳ ನಡುವಿನ ರಣಜಿ ಪಂದ್ಯದ ವೇಳೆ ಹಾವೊಂದು ದಿಢೀರ್​​ ಆಗಿ ಪ್ರತ್ಯಕ್ಷಗೊಂಡಿರುವ ಘಟನೆ ನಡೆದಿದೆ.

Snakes Interrupt Mumbai vs Karnataka Tie
ರಣಜಿ ಪಂದ್ಯದ ವೇಳೆ ಹಾವು

By

Published : Jan 6, 2020, 8:21 PM IST

ಮುಂಬೈ:ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶ ಹಾಗೂ ವಿದರ್ಭ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದ್ದ ವೇಳೆ ಏಕಾಏಕಿಯಾಗಿ ಮೈದಾನಕ್ಕೆ ಹಾವೊಂದು ಲಗ್ಗೆ ಹಾಕಿ ಆಟಗಾರರಲ್ಲಿ ಕೆಲಹೊತ್ತು ಆತಂಕ ಸೃಷ್ಠಿಸಿದ ಘಟನೆ ನಡೆದಿತ್ತು.
ಇದೀಗ ಅಂತಹ ಮತ್ತೊಂದು ಘಟನೆ ನಡೆದಿದ್ದು, ಕರ್ನಾಟಕ-ಮುಂಬೈ ತಂಡಗಳ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಈ ಅಪರೂಪದ ಅತಿಥಿ ಕಾಣಿಸಿಕೊಂಡಿದೆ.

ರಣಜಿ ಟ್ರೋಫಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಅಪರೂಪದ ಅತಿಥಿ... ದಿಗಿಲುಗೊಂಡ ಆಟಗಾರರು!

ಬಾದ್ರಾ ಕುರ್ಲಾ ಕಾಂಪ್ಲೆಕ್ಸ್​​ ಮೈದಾನದಲ್ಲಿ ನಿನ್ನೆ ಕರ್ನಾಟಕ-ಮುಂಬೈ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಟಗಾರರು ಮೈದಾನದಲ್ಲಿದ್ದ ವೇಳೆ ಹಾವು ಮೈದಾನಕ್ಕೆ ಲಗ್ಗೆ ಹಾಕಿದೆ. ಈ ವೇಳೆ ಕೆಲ ನಿಮಿಷಗಳ ಕಾಲ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು.

ಮೈದಾನಕ್ಕೆ ಹಾವು ಹಿಡಿಯುವವರು ಬಂದ ಬಳಿಕ ಅದನ್ನ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್​ಗಳ ಗೆಲುವು ಸಾಧಿಸಿದೆ.

ABOUT THE AUTHOR

...view details